ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ಕಾಳಮ್ಮವಾಡಿ, ರಾಧಾನಗರಿ, ಮಹಾಬಳೇಶ್ವರ, ಕೊಯ್ನಾ ಮುಂತಾದ ಕಡೆಗೆ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲೂ ಜಿಟಿ ಜಿಟಿ ಮಳೆಯು ಸುರಿಯುತ್ತಲೇ ಇದೆ.
ಹೀಗಾಗಿ ಉಪ ವಿಭಾಗ ವ್ಯಾಪ್ತಿಯಲ್ಲಿ ಈಗಾಗಲೇ ವೇದಗಂಗಾ ನದಿಯ 4, ದೂಧಗಂಗಾ ನದಿಯ 4, ಕೃಷ್ಣಾ ನದಿಯ 1 ಸೇತುವೆ ಜಲಾವೃತಗೊಂಡಿವೆ. ಗುರುವಾರ ಬೆಳಿಗ್ಗೆ ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿರುವ ಯಕ್ಸಂಬಾ-ದತ್ತವಾಡ ಬೃಹತ್ ಸೇತುವೆ ಮುಳುಗಡೆಯಾಗಿ ಚಿಕ್ಕೋಡಿ ಉಪ ವಿಭಾಗದಲ್ಲಿ ಜಲಾವೃತಗೊಂಡ ಸೇತುವೆಗಳ ಸಂಖ್ಯೆ 10ಕ್ಕೆ ಏರಿದಂತಾಗಿದೆ.