Breaking News

ಲಿಂಗನಮಕ್ಕಿಯಲ್ಲಿ ಭಾರೀ ಒಳಹರಿವು: ಗಂಗೆ ಪೂಜೆ

Spread the love

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಒಳಹರಿವು ಬರುತ್ತಿದ್ದು 1804.80 ಅಡಿಗೆ ತಲುಪಿದೆ. ಜಲಾಶಯ ನೀರಿನ ಮಟ್ಟವು ಈಗಾಗಲೇ ಗೇಟ್ ಮಟ್ಟ ತಲುಪಿದ್ದು ಸಂಪ್ರದಾಯದಂತೆ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಶುಕ್ರವಾರ ಗಂಗೆ ಪೂಜೆ ನೆರವೇರಿಸಿದರು. ನಂತರ ಕೆಲ ನಿಮಿಷಗಳ ಕಾಲ ಗೇಟ್ ಮೂಲಕ ನೀರು ಹೊರಬಿಡಲಾಯಿತು.

Shivamogga; ಲಿಂಗನಮಕ್ಕಿಯಲ್ಲಿ ಭಾರೀ ಒಳಹರಿವು: ಗಂಗೆ ಪೂಜೆ

ರಾಜ್ಯಕ್ಕೆ ಅತಿ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಪೂರೈಸುವ ಏಕೈಕ ಜಲಾಶಯ ಇದಾಗಿದ್ದು ಶುಕ್ರವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ 1804.40 ಅಡಿ ತಲುಪಿತ್ತು. ಪ್ರತಿ ವರ್ಷ 1790 ಅಡಿ ದಾಟಿದ ಮೇಲೆ ವಾಡಿಕೆಯಂತೆ ಪೂಜೆ ನಡೆಸಲಾಗುತ್ತದೆ. 1790 ಅಡಿ ದಾಟಿದ ನಂತರ ನೀರು ಗೇಟ್ ಮಟ್ಟಕ್ಕೆ ತಲುಪುತ್ತದೆ. ಈ ವೇಳೆ ಪೂಜೆ ಸಲ್ಲಿಸಿ ಕೆಲ ನಿಮಿಷ ಗೇಟ್ ತೆರೆದು ನೀರು ಹೊರಬಿಡಲಾಗುತ್ತದೆ. ಜಲಾಶಯ ಅರ್ಧ ಭರ್ತಿಯಾದರೂ ವರ್ಷ ಪೂರ್ತಿ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಬಾರಿ ಪೂರ್ಣ ಭರ್ತಿಯಾಗುವ ಭರವಸೆ ಇದ್ದು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ.


Spread the love

About Laxminews 24x7

Check Also

ಡಿಕೆಶಿ-ಸಿದ್ದರಾಮಯ್ಯ ಬಣಗಳ ಮುಖಂಡರ ನಡುವೆ ಪರಸ್ಪರ ವಾಕ್ಸಮರ

Spread the loveತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ