ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಹಿನ್ನೆಲೆ
ಕೃಷ್ಣಾ ನದಿಗೆಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಮುಳುಗಡೆ ಭೀತಿಯಲ್ಲಿದೆ.
ಅಥಣಿಯ ಹುಲಗಬಾಳ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ 40ಕ್ಕೂ ಹೆಚ್ಚು ಕುಟುಂಬಗಳಿಗೆ ಹೊರಗೆ ಬಾ ಎಂದು ಅಧಿಕಾರಿಗಳು ಕರೆದರು ಜನ ಖ್ಯಾರೆ ಎನ್ನುತ್ತಿಲ್ಲ. ಮಾಂಗ್ ವಸತಿ ತೋಟದ ಜನ ಸಂಪರ್ಕ ರಸ್ತೆ ಕಳೆದುಕೊಂಡರು ಸುರಕ್ಷಿತ ಸ್ಥಳಕ್ಕೆ ಬರುತ್ತಿಲ್ಲ.ಮಕ್ಕಳು, ವಯೋವೃದ್ದರೂ ಜೊತೆಯಾಗಿ ದನಕರುಗಳು ಕೂಡ ನಡುಗಡ್ಡೆಯಲ್ಲಿ ಸಿಲುಕಿದ್ದು. ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆ ತಗೆಕೊಂಡಿದ್ದಾರೆ.