Breaking News

ಮೂಡಲಗಿ | ಚಿರತೆ ಸುದ್ದಿ: ಆತಂಕ ಸೃಷ್ಟಿ

Spread the love

ಮೂಡಲಗಿ : ‘ತಾಲ್ಲೂಕಿನ ನಾಗನೂರ ಗ್ರಾಮದ ಅರಣ್ಯಸಿದ್ದೇಶ್ವರ ತೋಟದ ಸಿದ್ದಪ್ಪ ಜಾವಲಿ ಎಂಬುವವರ ಗದ್ದೆಯಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿ ಸಂಜು ಸವಸುದ್ದಿ ಪರಿಶೀಲನೆ ನಡೆಸಿ ಅದು ಚಿರತೆ ಅಲ್ಲ ಕಾಡು ಬೆಕ್ಕು ಎಂದು ತಿಳಿಸಿದ್ದಾರೆ.

ಮೂಡಲಗಿ | ಚಿರತೆ ಸುದ್ದಿ: ಆತಂಕ ಸೃಷ್ಟಿ

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹಾದೇವ ಸನ್ನಮುರಿ, ಸಾರ್ವಜನಿಕರ ಹಿತ ದೃಷ್ಟಿಯಿಂದ ರಾತ್ರಿ ವೇಳೆ ಒಬ್ಬೊಬ್ಬರಾಗಿ ತಿರುಗಾಡದಂತೆ ಹಾಗೂ ಮಕ್ಕಳು, ಜಾನುವಾರುಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪಟ್ಟಣದಲ್ಲಿ ಡಂಗುರ ಸಾರಿಸಿದ್ದಾರೆ.

ಶಾಲೆಗೆ ರಜೆ: ಚಿರತೆ ಓಡಾಡಿದ ಸಂಶಯ ಇರುವ ಸ್ಥಳದ ಪಕ್ಕದಲ್ಲಿ ಅರಣ್ಯಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಹಿತದೃಷ್ಟಿಯಿಂದ ಜುಲೈ 24ರಂದು ಒಂದು ದಿನ ಶಾಲೆಗೆ ರಜೆ ನೀಡಲು ತಹಶೀಲ್ದಾರ್‌ ಮಹಾದೇವ ಸನ್ನಮುರಿ ನಿರ್ದೇಶಿಸಿದಂತೆ ಬಿಇಒ ಅಜಿತ್ ಮನ್ನಿಕೇರಿ ಅವರು ಆ ಶಾಲೆಗೆ ಒಂದು ದಿನ ರಜೆ ಘೋಷಿಸಿದ್ದಾರೆ.


Spread the love

About Laxminews 24x7

Check Also

ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ

Spread the loveಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳಿಗೆ ಸೇರಿದ ನೂರಾರು ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ