ದಾಂಡೇಲಿ : ನದಿಯಲ್ಲಿ, ನದಿಯ ಸುತ್ತಮುತ್ತ, ರಸ್ತೆಗಳಲ್ಲಿ ಮೊಸಳೆಗಳು ಅಡ್ಡಾಡುತ್ತಿರುವುದನ್ನು ಆಗೊಮ್ಮೆ ಈಗೊಮ್ಮೆ ನೋಡಿದ್ದೇವೆ. ಆದರೆ ಆಸ್ಪತ್ರೆಯ ಒಳಗಡೆ ಮೊಸಳೆಯ ಮರಿಯೊಂದು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ದಾಂಡೇಲಿಯ ಇಎಸ್‌ಐ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಆಸ್ಪತ್ರೆಯೊಳಗಡೆ ಪ್ರತ್ಯಕ್ಷವಾದ ಮೊಸಳೆಯ ಮರಿಯನ್ನು ನೋಡಿದೊಡನೆ ಸಿಬ್ಬಂದಿಗಳು ಒಮ್ಮೆಲೆ ಭಯ ಮತ್ತು ಅಚ್ಚರಿಗೊಂಡಿದ್ದಾರೆ. ತಕ್ಷಣವೆ ಇ.ಎಸ್.ಐ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತುಕರಾಮ ಅವರು ಮೊಸಳೆಯ ಮರಿಯನ್ನು ಸುರಕ್ಷಿತವಾಗಿ ಹಿಡಿದು, ನದಿಗೆ ಬಿಟ್ಟು ಬಂದಿದ್ದಾರೆ.
ಒಟ್ಟಿನಲ್ಲಿ ದಾಂಡೇಲಿಯ ಕಾಳಿ ನದಿಯಲ್ಲಿರುವ ಮೊಸಳೆಗಳು ಈಗ ನಗರದ ಹೃದಯ ಭಾಗದಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ಬರುವಷ್ಟರ ಮಟ್ಟಿಗೆ ಮುಂದಡಿಯಿಟ್ಟಿದೆ.