ಕಾರಟಗಿ: ಸಾಲದ ಹೊರೆಯಿಂದ ಬಳಲಿದ್ದ ತಾಲ್ಲೂಕಿನ ಹುಳ್ಕಿಹಾಳ ಗ್ರಾಮದ ರೈತ ನರಸಪ್ಪ ಗಂಗಾವತಿ (45) ಹೊಲದಲ್ಲಿ ರಾಸಾಯನಿಕ ಕುಡಿದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನರಸಪ್ಪ ಹೊಲದ ಮೇಲೆ ₹2.50 ಲಕ್ಷ ಮತ್ತು ಕೈಗಡವಾಗಿ ₹6ರಿಂದ ₹7 ಲಕ್ಷ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬಾರದ್ದರಿಂದ ಸಾಲ ಹೇಗೆ ತೀರಿಸಬೇಕು ಎಂದು ಗೋಳಾಡುತ್ತಿದ್ದ.
ಈ ಕುರಿತು ನಾನು ಹಾಗೂ ನನ್ನ ಇನ್ನುಳಿದ ಮಕ್ಕಳು ಬುದ್ಧಿವಾದ ಹೇಳಿದ್ದರೂ ಯಾರೊಂದಿಗೂ ಹೆಚ್ಚು ಮಾತನಾಡದೆ ಮಾನಸಿಕವಾಗಿದ್ದ. ಭಾನುವಾರ ಹೊಲದಲ್ಲಿ ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ನರಸಪ್ಪ ಅವರ ತಾಯಿ ಮಲ್ಲಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನಾಧರಿಸಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.