Breaking News

ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ನಿಮಗೇನು ಕಷ್ಟ ಹೋರಾಟಗಾರರನ್ನು ಶೂಟ್ ಮಾಡಿ ಬಿಸಾಕಿ:ಋಷಿಸ್ವಾಮಿ

Spread the love

ಡಿಸೆಂಬರ್: ಡಿ.5ರಂದು ಕನ್ನಡ ಹೋರಾಟಗಾರರು ಬಂದ್‍ಗೆ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಕಾಳಿ ಮಠದ ಋಷಿಕುಮಾರ ಎಂಬ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ನಿಮಗೇನು ಕಷ್ಟ. ಅವರು ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ ಎಂದು ಮರಾಠಿಗರ ಪರ ಬ್ಯಾಟ್ ಬೀಸಿದ್ದಾರೆ. ಇದರ ಜೊತೆಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸ್ವಾಮಿ ಬಿಎಸ್‍ವೈ ಇಂತವರನ್ನೆಲ್ಲಾ ಶೂಟ್ ಮಾಡಿ ಬಿಸಾಕಬೇಕು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಇಂತವರಿಗೆ ಹೇಗೆ ಬುದ್ದಿ ಕಲಿಸುತ್ತೆ ಗೊತ್ತಲ್ವಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ರಾಮಸೇನಾ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗಡಿ ಮುಚ್ಚಿಸಲು ಬಂದರೆ ಕಲ್ಲಲ್ಲಿ ಹೊಡೆದು ಕಳಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಾಟಾಳ್ ನಾಗರಾಜ್ ವಿರುದ್ಧ ಕಿಡಿ ಕಾರಿದರು. ಯಾರೋ ಬರ್ತಾರೆ ಬಂದ್ ಮಾಡಿ ಎಂದು ಬೆದರಿಕೆ ಹಾಕ್ತಾರೆ, ಕರ್ನಾಟಕ ಏನು ಅವರಪ್ಪನ ಮನೆದಾ..? ಎಂದು ಋಷಿಕುಮಾರ ಸ್ವಾಮಿ ಕಿಡಿ ಕಾರಿದ್ದಾರೆ. ಅಲ್ಲದೆ ಯಾವನೇ ಬಂದು ಅಂಗಡಿ ಬಾಗಿಲು ಮುಚ್ಚಿಸುವ ಪ್ರಯತ್ನ ಮಾಡಿದರೆ ಅಂತವರಿಗೆ ಕಲ್ಲಲ್ಲಿ ಹೊಡೆಯಿರಿ, ಸರಿಯಾಗಿ ಬುದ್ದಿ ಕಲಿಸಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ