ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ (Sandalwood) ಗರಬಡಿದಂತೆ ಆಗಿದ್ದು ಜನರು ಥಿಯೇಟರ್ಗೆ (Theater) ಬರದ ಕಾರಣ ಹಲವು ಸಿನಿಮಾಗಳು ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಇಲ್ಲದೆ ಮಕಾಡೆ ಮಲಗುತ್ತಿವೆ. ದೊಡ್ಡ ದೊಡ್ಡ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿಲ್ಲ,
ಇನ್ನು ದರ್ಶನ್ (Darshan) ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಇಂತಾ ಸಮಯದಲ್ಲಿ ಜನರನ್ನು ಥಿಯೇಟರ್ಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ.
ಈ ನಡುವೆ ರಾಜ್ಯ ಸರ್ಕಾರ ಸಿನಿಮಾ ಟಿಕೆಟ್ (Movie Ticket) ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ (OTT Subscription) ಮೇಲೆ ಸೆಸ್ ವಿಧಿಸಲು ಮುಂದಾಗಿದೆ.