Breaking News

ರಾಕಸಕೊಪ್ಪ ಜಲಾಶಯದ ನೀರು ಹೊರಕ್ಕೆ

Spread the love

ಬೆಳಗಾವಿ: ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭರ್ತಿಯಾಗಲು ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಹಾಗಾಗಿ, ಶುಕ್ರವಾರದಿಂದಲೇ ಎರಡು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಆರು ಇಂಚು ಅಂತರದಿಂದ ನೀರು ಹೊರ ಹರಿಸಲಾಗುತ್ತಿದೆ.ರಾಕಸಕೊಪ್ಪ ಜಲಾಶಯದ ನೀರು ಹೊರಕ್ಕೆ

ಪಶ್ಚಿಮ ಘಟ್ಟ ಪ್ರದೇಶ ಮತ್ತು ಮಾರ್ಕೆಂಡೇಯ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ.

ಮಾರ್ಕೆಂಡೇಯ ನದಿಗೆ ಕಟ್ಟಿರುವ ರಾಕಸಕೊಪ್ಪ ಅಣೆಕಟ್ಟೆ ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಭರ್ತಿಯಾಗಿದೆ. ಜಲಾಶಯದ ಕೆಳಹಂತದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಜಲಾಶಯ 0.67 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕನಿಷ್ಠ ನೀರಿನ ಸಂಗ್ರಹಣಾ ಗುರುತ್ವಾಕರ್ಷಣೆಯ ಮಟ್ಟಗಳು 2,446 ಅಡಿಯಷ್ಟು ನೀರು ಸಂಗ್ರಹಿಸಲು ಸಾಧ್ಯವಿದೆ. 2424 ಅಡಿಗಳವರೆಗೆ ಡೆಡ್‌ಸ್ಟೋರೇಜ್‌ ಇದೆ. ಗರಿಷ್ಠ ಮಟ್ಟ 2,475 ಅಡಿಗಳಲ್ಲಿ ಶುಕ್ರವಾರ 2,474 ಅಡಿ ತಲುಪಿದೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ