ಉಡುಪಿ: ಡೆತ್ ನೋಟ್ ಬರೆದಿಟ್ಟು ನಿರ್ಮಾಪಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ನಡೆದಿದೆ.
ನಾಗೇಶ್ ಕುಮಾರ್ (64) ನೇಣಿಗೆ ಶರಣಾದ ನಿರ್ಮಾಪಕ. ಮೃತ ನಾಗೇಶ್ ಕುಮಾರ್ ಚಲನಚಿತ್ರ ನಿರ್ದೇಶನಕ್ಕೆ 28 ಲಕ್ಷ ಹಣ ಹೂಡಿದ್ದರು. ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ ನಿರ್ದೇಶನದ ಚಲನಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದರು. ಆದರೆ ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ನಿರ್ಮಾಪಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೀಜಾಡಿ ಗ್ರಾಮದ ಲಕ್ಷ್ಮೀ ಗ್ಲಾಸ್ ಪ್ಲೈವುಡ್ ಅಂಗಡಿ ಹೊರಗಡೆ ಹಗ್ಗದದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾಗೇಶ್ ಡೆತ್‍ನೋಟ್ ಬರೆದಿಟ್ಟಿದ್ದಾರೆ. “ನನ್ನನ್ನು ಕ್ಷಮಿಸಿ. ಎಲ್ಲರಿಗೂ ಒಳ್ಳೆಯದಾಗಲಿ. ನನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.
ಈ ಬಗ್ಗೆ ಸಂಪೂರ್ಣ ತನಿಖೆ ಮಾಡಲಾಗುವುದು ಎಂದು ಕುಂದಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೋನಾ ಲಾಕ್‍ಡೌನ್, ಆರ್ಥಿಕ ನಷ್ಟದಿಂದ ಮೃತ ವ್ಯಕ್ತಿ ಕಂಗೆಟ್ಟಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೆ ಸಹ ನಟ ಸುಶೀಲ್ ಕುಮಾರ್ ಮಂಡ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ದುನಿಯಾ ವಿಜಯ್ ಅಭಿನಯದ ‘ಸಲಗ’ ಸಿನಿಮಾದಲ್ಲಿ ನಟ ಸುಶೀಲ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಮಂಡ್ಯದ ತಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದರು. ಆದರೆ ಅಲ್ಲಿಯೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು.
https://youtu.be/I1U-UG-NHuk