ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ 11ರ ವರೆಗೆ ಹಾಗೂ ಸಾಯಂಕಾಲ 6ರಿಂದ ರಾತ್ರಿ 9ರ ವರೆಗೆ ಒಟ್ಟು 5 ಗಂಟೆ ಗಸ್ತು ತಿರುಗುವಂತೆ ರಾಜ್ಯ ಡಿಜಿ-ಐಜಿಪಿ ಆಲೋಕ್ ಮೋಹನ್ ಪೊಲೀಸರಿಗೆ ಆದೇಶಿಸಿದ್ದಾರೆ.
ಕಮಿಷನರೆಟ್ ವ್ಯಾಪ್ತಿಯಲ್ಲಿ ಡಿಸಿಪಿಗಳು, ಜಿಲ್ಲೆಗಳಲ್ಲಿ ಎಸ್‌ಪಿ ನೇತೃತ್ವದಲ್ಲಿ ಪೊಲೀಸರು ಗಸ್ತು ತಿರುಗಬೇಕು.
ಪ್ರಮುಖ ಅಪರಾಧ ಪ್ರಕರಣಗಳು ಘಟಿಸಿದಾಗ ಸ್ಥಳಕ್ಕೆ ಭೇಟಿ ನೀಡಬೇಕು. ಆಯಾ ವಲಯ ಐಜಿಪಿಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು ಠಾಣೆಗಳಿಗೆ ಭೇಟಿ ನೀಡಬೇಕು.
ಶಾಲಾ ಕಾಲೇಜು ಸಮೀಪ ಗಸ್ತು ಭದ್ರತೆ ಹೆಚ್ಚಿಸಬೇಕು. ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಘೋಷಣೆ ಕೂಗುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಗರ ಮಟ್ಟದಲ್ಲಿ ನಿಯಮಿತವಾಗಿ ಶಾಂತಿಸಭೆ, ಜನಸ್ಪಂದನ ಸಭೆ ಆಯೋಜಿಸಬೇಕು ಎಂದು ಸೂಚಿಸಿದ್ದಾರೆ.
Laxmi News 24×7