Breaking News

ಗುಡ್ಡ ಕುಸಿತ: ಗೋವಾ-ಕರ್ನಾಟಕ ಸಂಚಾರ ಅಸ್ತವ್ಯಸ್ತ

Spread the love

ಣಜಿ: ಭಾರಿ ಮಳೆಯಿಂದಾಗಿ ಗುರುವಾರ ನಸುಕಿ ಜಾವ ಗೋವಾದ ಘಾಟ್ ವಿಭಾಗದಲ್ಲಿ ಗುಡ್ಡ ಕುಸಿದಿದ್ದು, ಬೃಹತ್ ಮಣ್ಣಿನ ರಾಶಿ ರಸ್ತೆಗೆ ಬಿದ್ದಿದೆ. ಪರಿಣಾಮ ಗೋವಾ-ಕರ್ನಾಟಕ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗೋವಾದ ದಕ್ಷಿಣ ಗಡಿಯಲ್ಲಿರುವ ಅನಮೋಡ್ ಘಾಟ್ ಪ್ರದೇಶದ ಶ್ರೀ ದೂಧ್‌ಸಾಗರ್ ದೇವಸ್ಥಾನದ ಬಳಿ ಗುಡ್ಡ ಕುಸಿದಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯಿಂದ ಅದನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಮೋಡ್‌ ಘಾಟ್ ವಿಭಾಗದಿಂದ ಕರ್ನಾಟಕದ ಬೆಳಗಾವಿ ಮತ್ತು ಖಾನಾಪುರಕ್ಕೆ ಸಂಚಾರ ಸ್ಥಗಿತಗೊಂಡಿದೆ ಎಂದು ಅವರು ಹೇಳಿದರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗೋವಾದಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕಳೆದ ಒಂದು ದಿನದಲ್ಲಿ ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಐಎಂಡಿ ಪ್ರಕಾರ ದಕ್ಷಿಣ ಗೋವಾದ ಪೊಂಡಾ ತಾಲ್ಲೂಕಿನಲ್ಲಿ ಅತಿ ಹೆಚ್ಚು 190 ಸೆಂ.ಮೀ. ಮಳೆಯಾಗಿದೆ.


Spread the love

About Laxminews 24x7

Check Also

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

Spread the loveಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ