Breaking News

ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಕುಸಿದ ಆವಕ; ₹100ರ ಗಡಿ ತಲುಪಿದ ಟೊಮೆಟೊ ದರ

Spread the love

ಬೆಳಗಾವಿ: ನಗರದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಕನಿಷ್ಠ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹50ರಷ್ಟಿದ್ದ ದರ ಏಕಾಏಕಿ ಗಗನಮುಖಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಸಗಟು ವ್ಯಾಪಾರದಲ್ಲಿ ಎರಡು ವಾರಗಳ ಹಿಂದೆ 10 ಕೆ.ಜಿಯ ಒಂದು ಬುಟ್ಟಿಗೆ ₹600 ದರವಿತ್ತು.

ವಾರದಿಂದಲೂ ದರ ಏರಿಸುತ್ತಲೇ ಇದ್ದಾರೆ. ಬುಧವಾರ ಬೆಳಿಗ್ಗೆ 10 ಕೆ.ಜಿಯ ಒಂದು ಟ್ರೇ ಟೊಮೆಟೊಗೆ ₹1000 ತೆಗೆದುಕೊಂಡಿದ್ದಾರೆ. ನಾವು ₹100ಕ್ಕೆ ಮಾರಿದರೂ ಹಾನಿ ಸಂಭವಿಸುತ್ತದೆ’ ಎಂದು ವ್ಯಾ‍ಪಾರಿಗಳು ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಕುಸಿದ ಆವಕ; ₹100ರ ಗಡಿ ತಲುಪಿದ ಟೊಮೆಟೊ ದರ

‘ಸದ್ಯ ಹೋಟೆಲ್‌ ಉದ್ಯಮಿಗಳನ್ನು ಬಿಟ್ಟರೆ ಬೇರೆ ಯಾರೂ ಟೊಮೆಟೊ ಖರೀದಿಸಲು ಮುಂದೆ ಬರುತ್ತಿಲ್ಲ. ಹಣ್ಣುಗಳು ಕೊಳೆತು ನಷ್ಟ ಸಂಭವಿಸಿದೆ’ ಎಂದು ವರ್ತಕ ಸುರೇಶ ಹೇಳಿದರು.

‘ನಮ್ಮ ಬಳಿ ಜವಾರಿ ಟೊಮೆಟೊ ಇವೆ. ನಿನ್ನೆ- ಮೊನ್ನೆ ₹80ರಂತೆ ಮಾರಿದ್ದೇನೆ. ಬುಧವಾರ ₹100 ದರ ಮಾಡಿದ್ದಾರೆ. ಆದರೆ, ಮಹಿಳೆಯರು ಚೌಕಾಶಿ ಮಾಡಿ ₹80ಕ್ಕೇ ಖರೀದಿಸುತ್ತಿದ್ದಾರೆ. ಇಡೀ ದಿನ ವ್ಯಾಪಾರ ಮಾಡಿದರೂ ₹100 ಉಳಿಯುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿಗಳು.

‘ಜಿಲ್ಲೆಯಲ್ಲಿ ಹಿಡಕಲ್ ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಾರೆ. ರೈತರು ಟೊಮೆಟೊವನ್ನು ಗೋವಾಗೆ ಸರಬರಾಜು ಮಾಡುತ್ತಾರೆ. ಮಹಾರಾಷ್ಟ್ರದ ಕರಾಡಾ, ನಾಸಿಕ, ಸತಾರಾ, ಕೊಲ್ಹಾಪುರ ಮತ್ತಿತರ ಪ್ರದೇಶಗಳಿಂದ ಬರುವ ವ್ಯಾಪಾರಿಗಳಿಂದ ನಾವು ಖರೀದಿಸುತ್ತೇವೆ. ಮಹಾರಾಷ್ಟ್ರದಲ್ಲಿ ಅತಿಯಾದ ಮಳೆಯಿಂದಾಗಿ ಟೊಮೆಟೊ ಆವಕ ಕಡಿಮೆಯಾಗಿದೆ. ಇದರಿಂದ ದರ ಹೆಚ್ಚಾಗಿದ್ದು, ನಮ್ಮಲ್ಲೂ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ‘ ಎಂದು ವರ್ತಕ ಇಬ್ರಾಹಿಂ ಹೇಳುತ್ತಾರೆ.

‘ಟೊಮೆಟೊ ಬದಲಾಗಿ ಹುಣಸೆಹಣ್ಣು, ನಿಂಬೆಕಾಯಿ ಬಳಸಿ ಅಡುಗೆ ಮಾಡಬಹುದು. ಆದರೆ, ಸಾಂಬಾರು ಮಾಡಲು ಟೊಮೆಟೊ ಬೇಕೇಬೇಕು. ನಮ್ಮ ಮನೆಯಲ್ಲಿ ಎಂಟು ಜನ ಇದ್ದೇವೆ. ಪ್ರತಿ ದಿನ ಅರ್ಧ ಕೆ.ಜಿ ಬಳಸುತ್ತೇವೆ. ದಿನಕ್ಕೆ ₹50ರಷ್ಟು ಟೊಮೆಟೊಗೇ ಖರ್ಚಾಗುತ್ತಿದೆ’ ಎನ್ನುವುದು ಗೃಹಿಣಿ ರೇಣುಕಾ ತೋಟಗಿ ಅವರ ಹೇಳಿಕೆ.


Spread the love

About Laxminews 24x7

Check Also

ರಾಜ್ಯಾದ್ಯಂತ ಆ.27ರಿಂದ ಮತ್ತೆ ಮಳೆ

Spread the love ಬೆಂಗಳೂರು: ರಾಜ್ಯಾದ್ಯಂತ ಆ.27ರಿಂದ ಮತ್ತೆ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ