Breaking News

ದಾಂಡೇಲಿಯ ಗಣೇಶನಗರದ ಅವಿವಾಹಿತ ಯುವಕ ನಾಪತ್ತೆ

Spread the love

ದಾಂಡೇಲಿ : ಸ್ಥಳೀಯ ಗಣೇಶನಗರದ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.

ಖಾಸಗಿ ಕೋರಿಯರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಗಣೇಶನಗರದ ನಿವಾಸಿ 27 ವರ್ಷ ವಯಸ್ಸಿನ ಪ್ರವೀಣ್ ತೆಗ್ಗಿ ಎಂಬಾತನೆ ನಾಪತ್ತೆಯಾದ ಯುವಕನಾಗಿದ್ದಾನೆ.

Missing: ದಾಂಡೇಲಿಯ ಗಣೇಶನಗರದ ಅವಿವಾಹಿತ ಯುವಕ ನಾಪತ್ತೆ

ಈತ ಜುಲೈ 3 ರಂದು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಂದಿಲ್ಲ. ಈತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತನನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಸುಳಿವೇ ಸಿಕ್ಕಿಲ್ಲ. ಅಂತಿಮವಾಗಿ ಈತನ ತಂದೆ ನಿಂಗಪ್ಪ ಗುರುಪಾದಪ್ಪ ತೆಗ್ಗಿ ಅವರು ಮಗನನ್ನು ಹುಡುಕಿ ಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಯುವಕನನ್ನು ಯಾರಾದರೂ ಎಲ್ಲಾದರೂ ನೋಡಿದ್ದಲ್ಲಿ ಅಥವಾ ಈತನ ಬಗ್ಗೆ ಏನಾದರೂ ಮಾಹಿತಿ ದೊರೆತಲ್ಲಿ ತಕ್ಷಣವೇ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣೆ ತಿಳಿಸಿದೆ.


Spread the love

About Laxminews 24x7

Check Also

ಬೆಲೆ ಏರಿಕೆ ಖಂಡಿಸಿ ಮುಂದುವರೆದ ಬಿಜೆಪಿ ಅಹೋರಾತ್ರಿ ಧರಣಿ

Spread the loveಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಫ್ರೀಡಂ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದ್ದು,‌ ರಾತ್ರಿಯಾದರೂ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ