ಬೆಂಗಳೂರು, ನ.23- ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪಂಚರತ್ನ, ಪಂಚಸೂತ್ರ ವಿಧಾನದ ಮೂಲಕ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇಂದು ನಡೆದ ಸಂಘಟನಾ ಸಭೆ ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ಬರುತ್ತಿದೆ.
ಕಳೆದ ಬಾರಿ ತಂದಿದ್ದ ಯೋಜನೆಯಿಂದಾಗಿ ಯಶಸ್ವಿಯಾಗಿದ್ದೆವು. ಇದೀಗ ಪಂಚರತ್ನ, ಪಂಚಸೂತ್ರ ವಿಧಾನ ತಂದಿದ್ದೇವೆ. ಒಂದೊಂದು ಸಮುದಾಯವನ್ನೂ ಗುರಿಯಾಗಿಟ್ಟು ಈ ವಿಧಾನ ಅನುಸರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಒಟ್ಟು ಆರು ತಂಡಗಳನ್ನು ಮಾಡಿಕೊಂಡು ಗ್ರಾಮ ಸ್ವರಾಜ್ ಎಂಬ ಕಾರ್ಯಕ್ರಮ ರೂಪಿಸಿ ಅದರಡಿ ಜಿಲ್ಲಾಯಲ್ಲಿ ಎರಡು ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ. ರಾಜ್ಯದ ನಗರ ಬಿಟ್ಟು ಎಲ್ಲೆಡೆ ಸಮಾವೇಶ ನಡೆಸಲಾಗುವುದು ಎಂದು ವಿವರಿಸಿದರು.
Laxmi News 24×7