ಬೆಳಗಾವಿ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ವಿವಿಧ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚಿಸಿದ ಅಂತಾರಾಜ್ಯ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿ ಸಿ 12 ಲಕ್ಷ ರೂ. ನಗದು ಹಾಗೂ 15 ಕಂಪ್ಯೂಟರ್, ಡೆಬಿಟ್ / ಕ್ರೆಡಿಟ್ ಕಾರ್ಡ್ ಸೇರಿ 12 ಲಕ್ಷ ರೂ.
ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಕಲ್‌ನ ಅರಗೊಂಡ ಅರವಿಂದ ಉರೂಫ್ ಅರುಣ ಕುಮಾರ (47) ಬಂಧಿತ ಆರೋಪಿ. ಬೆಳಗಾವಿ ನಗರದ ಕೃಷ್ಣದೇವರಾಯ ಸರ್ಕಲ್‌ನಲ್ಲಿ ಅರವಿಂದ ನೀಟ್ ಗೈಡ್‌ಲೈನ್ಸ್ ಎಂಬ ಸಂಸ್ಥೆ ಆರಂಭಿಸಿದ್ದ ಆತ ಕೆಲವು ಶಿಕ್ಷಕರನ್ನು ನೇಮಿಸಿ ನೀಟ್ ಮಾರ್ಗದರ್ಶನ ನೀಡುತ್ತಿದ್ದ.
ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ಬೇರೆ ಬೇರೆ ಕೋಟಾದಡಿ ಕಡಿಮೆ ಶುಲ್ಕದಲ್ಲಿ ಸೀಟು ಮಾಡಿಕೊಡುವುದಾಗಿ ನಂಬಿಸಿದ್ದ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಡೆಯಿಂದ 1.30 ಕೋಟಿ ರೂ. ವಸೂಲಿ ಮಾಡಿದ್ದಾನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.