Breaking News

ರಾಜ್ಯದ 435 ಮಂದಿಯಲ್ಲಿ ಡೆಂಗ್ಯೂ ದೃಢ,

Spread the love

ಬೆಂಗಳೂರು: ಬಿಬಿಎಂಪಿ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ 435 ಡೆಂಗ್ಯೂ ಪ್ರಕರಣ ವರದಿಯಾಗಿದೆ. ಶಿವಮೊಗ್ಗದ ಓರ್ವ ವ್ಯಕ್ತಿ ಡೆಂಗ್ಯೂವಿನಿಂದ ಮೃತಪಟ್ಟಿದ್ದು, ಆ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.Danger Dengue: ರಾಜ್ಯದ 435 ಮಂದಿಯಲ್ಲಿ ಡೆಂಗ್ಯೂ ದೃಢ,  ಒಟ್ಟು ಪ್ರಕರಣ 9,962ಕ್ಕೆ ಏರಿಕೆ

ಬಿಬಿಎಂಪಿ 363, ಮಂಡ್ಯ 36, ಧಾರವಾಡ 14,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 5, ಕೊಪ್ಪಳ 4, ಬಳ್ಳಾರಿ 3, ಬಾಗಲಕೋಟೆ 2, ಬೆಂಗಳೂರು ನಗರ, ಶಿವಮೊಗ್ಗ, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

65 ಮಂದಿ ಡೆಂಗ್ಯೂ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ವ್ಯಕ್ತಿಗಳ ಮರಣ ಪ್ರಮಾಣ ಶೇ. 0.08ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ 4,989 ಶಂಕಿತ ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರ್ಷದೊಳಗಿನ 5 ಮಂದಿ, 18 ವರ್ಷದೊಳಗಿನ 98 ಮಕ್ಕಳು, 18 ವರ್ಷ ಮೇಲ್ಪಟ್ಟ 332 ಮಂದಿಯಲ್ಲಿ ಸೋಂಕು ದೃಢವಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 9,962ಕ್ಕೆ ಏರಿಕೆಯಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ