ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಸಲಾಮವಾಡಿ ಗ್ರಾಮದ ಜಮೀನಿನಲ್ಲಿ ಗಾಯಗೊಂಡು ಹಾರಲಾರದೆ ಒದ್ದಾಡುತ್ತಿದ್ದ ನವಿಲನ್ನು ರೈತ ಉತ್ತಮ ಪಾಟೀಲ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಎಂದಿನಂತೆ ಕೆಲಸಕ್ಕಾಗಿ ಉದಯ ಹೊಲಕ್ಕೆ ಬಂದರು. ಆಗ ಕಾಲಿಗೆ ಪೆಟ್ಟಾಗಿದ್ದರಿಂದ ನವಿಲು ಹಾರಲಾಗದೆ ಒದ್ದಾಡುತ್ತಿರುವುದು ಕಂಡುಬಂತು.

ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ದಡ್ಡಿ ಗ್ರಾಮದ ಪಶು ಚಿಕಿತ್ಸಾಲಯಕ್ಕೆ ನವಿಲು ತೆಗೆದುಕೊಂಡು ಹೋಗಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
ನಂತರ ಅರಣ್ಯ ಇಲಾಖೆ ಅಧಿಕಾರಿಗಳಾದ ಪ್ರಸನ್ನ ಬೆಲ್ಲದ, ಪ್ರಭು ತಗಡಿ, ರಮೇಶ ಕಮತೆ ಅವರು, ನವಿಲನ್ನು ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಬಿಟ್ಟು ಬಂದರು.
Laxmi News 24×7