Breaking News

ವರ್ಗಾವಣೆ ನಿಯಮ ಬದಲು ಸರ್ಕಾರದ ವಿರುದ್ಧ ಖಾಕಿ ಕೆಂಡ!

Spread the love

ಬೆಂಗಳೂರು ;ಪೊಲೀಸ್ ಕಾನ್​ಸ್ಟೆಬಲ್​ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವವರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷ ಅವಧಿಗೆ ಹೆಚ್ಚಳ ಮಾಡುವ ಸಿದ್ಧತೆ ನಡೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್​ಸ್ಟೆಬಲ್​ಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗಿಳಿಯುವ ಎಚ್ಚರಿಕೆ ಕೊಟ್ಟಿದ್ದಾರೆ.

ವರ್ಗಾವಣೆ ನಿಯಮ ಬದಲು ಸರ್ಕಾರದ ವಿರುದ್ಧ ಖಾಕಿ ಕೆಂಡ!

ಮೊದಲಿಗೆ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿದರೆ ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ನಂತರ 3 ವರ್ಷ ಅವಧಿಗೆ ಏರಿಸಲಾಯಿತು. 2019ರಲ್ಲಿ 5 ವರ್ಷ ಸೇವಾವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನಷ್ಟೇ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವುದಾಗಿ ಆದೇಶ ಹೊರಡಿಸಲಾಯಿತು. ಅದಾದ ಕೆಲವೇ ದಿನಗಳಿಗೆ ಪುನಃ 7 ವರ್ಷದ ಅವಧಿಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿತು.

ಪದೇಪದೆ ಅವಧಿ ಹೆಚ್ಚಳದಿಂದ ವರ್ಗಾವಣೆ ಭಾಗ್ಯ ಸಿಗದೆ ಪೊಲೀಸ್ ಕಾನ್​ಸ್ಟೆಬಲ್​ಗಳು ರೋಸಿದ್ದಾರೆ. ಪ್ರವೀಣ್ ಸೂದ್ ಡಿಜಿಪಿಯಾಗಿದ್ದಾಗ ಪೊಲೀಸರ ವರ್ಗಾವಣೆ ಅನುಕೂಲಕ್ಕಾಗಿಯೇ ಕೆಎಸ್​ಪಿ ಪೋರ್ಟಲ್ ಅಭಿವೃದ್ಧಿಪಡಿಸಿ, ಅನುಷ್ಠಾನಕ್ಕೆ ತರಲಾಗಿತ್ತು.

ಪೋರ್ಟಲ್​ನಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಎಂಬ ನಿಯಮವನ್ನು ಪೊಲೀಸ್ ಇಲಾಖೆಯೇ ಜಾರಿಗೆ ತರಲಾಗಿತ್ತು. ಆದರೆ, ಪೊರ್ಟಲ್ ನಿಯಮದ ಪ್ರಕಾರವೇ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ಕಾನ್​ಸ್ಟೆಬಲ್​ಗಳು ಕಾಯುತ್ತಿದ್ದಾರೆ.

ಆದರೀಗ ವರ್ಗಾವಣೆ ಅವಧಿಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಡಿಜಿಪಿ ಕಚೇರಿಯಿಂದ ಗೃಹಸಚಿವರ ಕಚೇರಿಗೆ ಕಡತ ರವಾನೆಯಾಗಿದೆ. ಸರ್ಕಾರವೂ ನಿಯಮಕ್ಕೆ ತಿದ್ದುಪಡಿ ತಂದು ಏರಿಕೆ ಮಾಡಲು ನಿರ್ಧರಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೃಹಸಚಿವರು ಕಾನ್​ಸ್ಟೆಬಲ್​ಗಳ ವರ್ಗಾವಣೆ ಹಾಗೂ ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಸದ್ಯ ಯಾವುದೇ ರೀತಿ ತಿದ್ದುಪಡಿ ಮಾಡದೆ ಈಗಾಗಲೇ ರೂಪಿಸಿರುವ ಕೆಎಸ್​ಪಿ ಪೋರ್ಟಲ್ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಕಾನ್​ಸ್ಟೆಬಲ್​ಗಳು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ