Breaking News

ಶರಣರ ಬೆಳ್ಳಿ ಪುತ್ಥಳಿ ಕಳವು

Spread the love

ಚಿತ್ರದುರ್ಗ: ಮುರುಘಾಮಠ ಪ್ರಾಂಗಣದ ಮೇಲ್ಬಾಗದಲ್ಲಿನ ದರ್ಬಾರ್ ಹಾಲ್‌ನಲ್ಲಿದ್ದ 22 ಕೆಜಿ ತೂಕದ 16 ಲಕ್ಷ ರೂ. ಮೌಲ್ಯದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಕಳ್ಳತನವಾಗಿದೆ.

ಪುತ್ಥಳಿಯನ್ನು ಜು. 4ರಂದು ಕಡೆಯದಾಗಿ ನೋಡಿದ್ದ ಶ್ರೀಮಠದ ವಿಜಯದೇವರು ಕಳ್ಳತನ ಆಗಿರುವ ವಿಚಾರವನ್ನು 10ರಂದು ಮೊದಲು ಶ್ರೀ ಬಸವಪ್ರಭು ಸ್ವಾಮೀಜಿ ಅವರ ಗಮನಕ್ಕೆ ತಂದಿದ್ದಾರೆ.

ಅಂದು ಸಂಜೆ 7ಕ್ಕೆ ಬಾಗಿಲು ತೆರೆದು ನೋಡಿದರೆ, ಪುತ್ಥಳಿ ಇರಲಿಲ್ಲ. ಪರಿಶೀಲಿಸಿದಾಗ ಎಲ್ಲಿಯೂ ಕಾಣದ ಕಾರಣ ಕಳ್ಳತನ ಆಗಿರುವ ಶಂಕೆ ವ್ಯಕ್ತವಾಗಿದೆ.

ಶ್ರೀಮಠದ ಪ್ರಸ್ತುತ ಅಧ್ಯಕ್ಷ ಶಿವಯೋಗಿ ಸಿ ಕಳಸದ ಅವರ ಗಮನಕ್ಕೆ ಬಂದ ನಂತರ ದೂರು ನೀಡಲು ಮೌಖಿಕವಾಗಿ ಆದೇಶಿಸಿದ್ದರಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಶ್ರೀ ಪುತ್ಥಳಿ ಹುಡುಕಿಕೊಡುವಂತೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸುವಂತೆ ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಪುತ್ಥಳಿ ಹಿನ್ನೆಲೆ: ಮುರುಘಾ ಶರಣರ ಪೀಠಾರೋಹಣದ 3ನೇ ದಶಮಾನೋತ್ಸವದ ಸವಿನೆನಪಿಗಾಗಿ ವಚನ ರಚನೆಯ ಅವರದ್ದೇ ಭಾವಚಿತ್ರದ ಮಾದರಿಯ ಬೆಳ್ಳಿ ಪುತ್ಥಳಿಯನ್ನು ಗುರುವಂದನೆಯಾಗಿ 2021ರ ಶರಣ ಸಂಸ್ಕೃತಿ ವೇಳೆ ಸಮರ್ಪಿಸಲಾಗಿತ್ತು.

ಶ್ರೀಮಠದ ಭಕ್ತರು, ಶಿಷ್ಯಂದಿರು ಬೆಳ್ಳಿಯನ್ನು ಪುತ್ಥಳಿ ನಿರ್ಮಿಸಲಿಕ್ಕಾಗಿ ದೇಣಿಗೆ ನೀಡಿದ್ದರು. ಉದ್ದೇಶಿತ ತೂಕಕ್ಕಿಂತ ಅಂದಾಜು 2 ಕೆಜಿ ಅಧಿಕ ಬೆಳ್ಳಿ ಕೂಡ ಆ ವೇಳೆ ಬಳಕೆಯಾಗಿತ್ತು.

ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕಳವು ಸಂಬಂಧ ವಿವಿಧ ಸಮುದಾಯದ ಭಕ್ತರೊಂದಿಗೆ ಸಭೆ ನಡೆಸಲಾಗಿದೆ. ಪೊಲೀಸರಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ ಎಂಬ ಅಭಿಪ್ರಾಯ ಮುರುಘಾಮಠದ ಭಕ್ತರಿಂದ ಕೇಳಿಬಂತು. ಹೀಗಾಗಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

See also15 ದಿನಗಳಿಗೊಮ್ಮೆ ಸ್ವಚ್ಛತೆಗೆ ಮನವಿ


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ