Breaking News

ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಪುಸ್ತಕ ಬಿಡುಗಡೆ

Spread the love

ಬೆಂಗಳೂರು : ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗುತ್ತಿದೆ.

ಇದೇ ಜುಲೈ 14, ಭಾನುವಾರದಂದು ಬೆಂಗಳೂರು ವಿಜಯನಗರದಲ್ಲಿರುವ ಎಂ. ಚಿದಾನಂದಮೂರ್ತಿ ಸಭಾಂಗಣದಲ್ಲಿ ಜರುಗುವ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಬರಹಗಾರರಾದ ಜೋಗಿ, ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ ಹಾಗೂ ವೀರಲೋಕ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಪುಸ್ತಕ ಬಿಡುಗಡೆ

ಸಿಗ್ನಲ್ ಜಂಪ್ ನಲ್ಲಿ ನಾಡಿನ ಹತ್ತು ಬರಹಗಾರರು

ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿನ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ.

ವಿಶೇಷ ಎಂದರೆ ಆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡಾ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಅಚ್ಚಾಗಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನ ಎಂದು ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್ ಅವರು ಹೇಳಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ