ಶಾಲಾ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವವರು. ವಿಧ್ಯೆ ಕಲಿಸುವ ಶಿಕ್ಷಕರ ಮೇಲೆ ತಮ್ಮ ಮಕ್ಕಳ ಭವಿಷ್ಯವನ್ನೇ ಮುಡಿಪಾಗಿಟ್ಟು ಪೋಷಕರು ಸುಂದರ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಶಿಕ್ಷಕರು ಶಾಕೆಯಲ್ಲೇ ಮೈ ಮರೆತರೆ ಏನಾಗಬಹುದು ಎಂಬುದಕ್ಕೆ ಈ ಸುದ್ದಿ ಸಾಕ್ಷಿಯಾಗಿದೆ.
ಹೌದು ಶಾಲೆಯ ಕೊಠಡಿಯಲ್ಲೇ ಮಹಿಳಾ ಶಿಕ್ಷಕಿ ಹಾಗೂ ಶಾಲೆಯ ಹೆಡ್ ಮಾಸ್ಟರ್ ಸೇರಿ ರೋಮ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಧ್ಯ ಈ ವೀಡಿಯೋ ನೋಡಿದ ನೆಟ್ಟಿಗರು ಶಾಲಾ ಶಿಕ್ಷಕರ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

ಈ ನಾಚಿಕೆಗೇಡಿನ ಘಟನೆ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ನಡೆದಿದ್ದು, ಇಲ್ಲಿನ ಪ್ರತಿಷ್ಠಿತ ಕಾನ್ವೆಂಟ್ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯೊಬ್ಬರು ಚಕ್ಕಂದವಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರೂ ಶಾಲಾ ಕೊಠಡಿಯಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ಸರಸ
ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಾಲೆಯಲ್ಲಿ ಮಹಾನ್ ವ್ಯಕ್ತಿಗಳ ಫೋಟೋಗಳ ಮುಂದೆಯೇ ಇಂತಹ ಕೃತ್ಯ ಎಸಗಿದ ಈ ಇಬ್ಬರೂ ಶಿಕ್ಷಕರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.