Breaking News

ಬೆಳೆ ವಿಮಾ‌ ಯೋಜನೆಗೆ ಅರ್ಜಿ‌ ಆಹ್ವಾನ

Spread the love

ಹೊಸಕೋಟೆ: 2024-25ನೇ ಸಾಲಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅಡಿಯಲ್ಲಿ ಹೊಸಕೋಟೆ ತಾಲ್ಲೂಕಿಗೆ ಮಾವು ಮತ್ತು ದ್ರಾಕ್ಷಿ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ರೈತ ಬಾಂಧವರು‌ ಸ್ವಇಚ್ಛೆಯಿಂದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕಾ ಇಲಾಖೆ ತಿಳಿಸಿದೆ.

ಬೆಳೆ ವಿಮಾ‌ ಯೋಜನೆಗೆ ಅರ್ಜಿ‌ ಆಹ್ವಾನ

ಪ್ರತಿ ಹೆಕ್ಟೇರ್ ಮಾವಿಗೆ ₹80 ಸಾವಿರ, ದ್ರಾಕ್ಷಿಗೆ ₹2.80 ಲಕ್ಷ ವಿಮಾ ಮೊತ್ತವಾಗಿದ್ದು, ಅದರಲ್ಲಿ ಶೇ 5ರಷ್ಟು ರೈತರು ವಂತಿಗೆ ಪಾವತಿಸಬೇಕಿದ್ದು, ಅದರಂತೆ ಮಾವಿಗೆ ₹5 ಸಾವಿರ, ದ್ರಾಕ್ಷಿಗೆ ₹ 14 ಸಾವಿರ ಪಾವತಿಸಬೇಕು.

ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 94834 78162, 82172 10320ಗೆ ಸಂಪರ್ಕಿಸುವಂತೆ ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ವಿಕಲಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಿಸಿದ ಶಾಸಕ ತಮ್ಮಣ್ಣವರ

Spread the love ಕುಡಚಿ: ರಾಯಬಾಗ ತಾಲೂಕಿನ ಅಲಖನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ