Breaking News

ಬೀದಿ ಬದಿ ಹೊಟೇಲ್‌, ಕಿರಾಣಿ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ

Spread the love

ಚಿಕ್ಕೋಡಿ: ನಗರದ ಬೀದಿ ಬದಿ ಗಾಡಾ ಅಂಗಡಿ ಮತ್ತು ಹೊಟೇಲ್‌ ನಲ್ಲಿ ಆಹಾರದಲ್ಲಿ ಟೇಸ್ಟಿಂಗ್ ಪೌಡರ್ ಕಲಬೆರಕೆ ಮಾಡಿ ಆಹಾರ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಮತ್ತು ಟೇಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 17 ಕೆಜಿ ಟೇಸ್ಟಿಂಗ್ ಪೌಡರ್ ವಶಪಡಿಸಿಕೊಂಡಿದ್ದಾರೆ.

Chikkodi: ಬೀದಿ ಬದಿ ಹೊಟೇಲ್‌, ಕಿರಾಣಿ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ

ಆಹಾರದಲ್ಲಿ ವಿಷ ಪದಾರ್ಥಗಳು ಕಲಬೆರಕೆ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆ ನಗರದ ರಾಜಸ್ತಾನಿ ಕಿರಾಣಿ ಅಂಗಡಿ ಮೇಲೆ ದಾಳಿ ಮಾಡಿದಾಗ ಆಹಾರದಲ್ಲಿ ಕಲಬೆರಕೆ ಮಾಡುವ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅದನ್ನು ವಶಪಡಿಸಿಕೊಂಡು ಅವರಿಗೆ ನೋಟಿಸ್ ಜಾರಿ ಮಾಡಿ ದಂಡ ಹಾಕಲಾಗುತ್ತದೆ ಎಂದು ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ತಿಳಿಸಿದರು.

ಬೀದಿ ಬದಿ ಗಾಡಾ ಅಂಗಡಿಗಳು ಮತ್ತು ಪ್ರಸಿದ್ಧ ಹೊಟೇಲ್ ಮಾಲಿಕರು ಆಹಾರದಲ್ಲಿ ವಿಷ ವಸ್ತುಗಳನ್ನು ಕಲಬೆರಕೆ ಮಾಡಬಾರದೆಂದು ಸರ್ಕಾರ ಟೇಸ್ಟಿಂಗ್ ಪೌಡರ್ ನಿಷೇಧ ಮಾಡಿದೆ. ಆದರೂ ವ್ಯಾಪಾರಸ್ಥರು ಟೇಸ್ಟಿಂಗ್ ಪೌಡರ್ ಹಾಕಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈಗಾಗಲೇ ಟೇಸ್ಟಿಂಗ್ ಪೌಡರ್ ಮಾರಾಟ ಮಾಡುವ ಅಂಗಡಿ ಮತ್ತು ಆಹಾರದಲ್ಲಿ ಕಲಬೆರಕೆ ಮಾಡುವ ಬೀದಿ ಬದಿ ಗಾಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದರು.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ