Breaking News

775 ಕೋಟಿ ಆಸ್ತಿಯಿದ್ದರೂ 30 ವರ್ಷಗಳಿಂದ ಸೀರೆಯನ್ನೇ ಖರೀದಿಸಿಲ್ಲ ಸುಧಾ ಮೂರ್ತಿ

Spread the love

ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಗಳಿಕೆ ಉತ್ತಮವಾಗಿದ್ದರೆ ಶಾಪಿಂಗ್‌ಗೆ ಬೇಡಿಕೆಯೂ ಹೆಚ್ಚುತ್ತದೆ. ಆದರೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ತಮಗಾಗಿ ಒಂದೇ ಒಂದು ಸೀರೆಯನ್ನೂ ಖರೀದಿಸಿಲ್ಲ.

ಸಂದರ್ಶನವೊಂದರಲ್ಲಿ ಅವರು ಬಿಚ್ಚಿಟ್ಟ ಈ ಸಂಗತಿ ಸಾಕಷ್ಟು ವೈರಲ್‌ ಆಗಿತ್ತು.

ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ಇದ್ದರೂ ಸುಧಾಮೂರ್ತಿ ತಮಗಾಗಿ ಒಂದೇ ಒಂದು ಸೀರೆಯನ್ನೂ ಖರೀದಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸುಧಾಮೂರ್ತಿ ಅವರ ಪತಿ ನಾರಾಯಣಮೂರ್ತಿ ಅವರ ಆಸ್ತಿ 36 ಸಾವಿರ ಕೋಟಿ ರೂಪಾಯಿ, ಇನ್ಫೋಸಿಸ್‌ನಂತಹ ದೊಡ್ಡ ಕಂಪನಿಯ ಮಾಲೀಕ ಅವರು. ಸುಧಾ ಮೂರ್ತಿ ಅವರ ಹೆಸರಿನಲ್ಲಿ ನೂರಾರು ಕೋಟಿ ಆಸ್ತಿ ಇದೆ. ಆದರೆ ಅವರ ಸರಳತೆ ಮಾತ್ರ ಎಲ್ಲರೂ ಮೆಚ್ಚುವಂತಿದೆ.

ಸೀರೆ ಖರೀದಿಸದೇ ಇರಲು ಕಾರಣ ಹಣವಲ್ಲ, ಸುಧಾಮೂರ್ತಿ ಅವರು ಮಾಡಿರುವ ಪ್ರತಿಜ್ಞೆ. ಸುಧಾ ಮೂರ್ತಿ ಅವರು 30 ವರ್ಷಗಳ ಹಿಂದೆ ಬನಾರಸ್‌ಗೆ ಹೋಗಿದ್ದರು. ಬನಾರಸ್ ಘಾಟ್‌ನಲ್ಲಿ ಗಂಗಾಸ್ನಾನ ಮಾಡುವಾಗ ತಮ್ಮ ನೆಚ್ಚಿನ ವಸ್ತುಗಳಲ್ಲಿ ಒಂದನ್ನು ತ್ಯಾಗ ಮಾಡುವುದಾಗ ಸುಧಾಮೂರ್ತಿ ಪ್ರತಿಜ್ಞೆ ಮಾಡಿದರು. ಶಾಪಿಂಗ್ ಅಂದ್ರೆ ಸುಧಾಮೂರ್ತಿ ಅವರಿಗೆ ಬಹಳ ಪ್ರಿಯವಾಗಿತ್ತು, ಆದ್ದರಿಂದ ಅವರು ಶಾಪಿಂಗ್‌ ಅನ್ನೇ ತ್ಯಜಿಸಿದರು. ವಿಶೇಷವಾಗಿ ಸೀರೆಗಳ ಖರೀದಿಯನ್ನು. ತನಗಾಗಿ ಸೀರೆ ಕೊಳ್ಳುವುದಿಲ್ಲ ಎಂದು ಅವರು ನಿರ್ಧರಿಸಿದರು.

ಈ ಪ್ರತಿಜ್ಞೆಯಿಂದಾಗಿ ಸುಧಾ ಮೂರ್ತಿ ಸೀರೆಗಳನ್ನು ಖರೀದಿಸುವುದಿಲ್ಲ. ಈ ವಿಚಾರ ತಿಳಿದ ಅವರ ಸಹೋದರಿಯರು ಮತ್ತು ಸ್ನೇಹಿತೆಯರು ಸುಧಾಮೂರ್ತಿ ಅವರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಫೋರ್ಬ್ಸ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ನಾರಾಯಣ ಮೂರ್ತಿ ಅವರ ಒಟ್ಟು ನಿವ್ವಳ ಮೌಲ್ಯ 4.4 ಶತಕೋಟಿ ಡಾಲರ್ ಅಂದರೆ ಸುಮಾರು 36,690 ಕೋಟಿ ರೂಪಾಯಿ. ಸುಧಾ ಮೂರ್ತಿ ಅವರ ಸಂಪತ್ತು 775 ಕೋಟಿ ರೂಪಾಯಿ. ಸುಧಾ ಮೂರ್ತಿ ಅವರಿಗೆ ಪುಸ್ತಕಗಳೆಂದರೆ ಬಹಳ ಪ್ರಿಯ, ಅವರ ಬಳಿ 20 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ