ಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ
ಗೃಹಲಕ್ಷ್ಮೀ ಯೋಜನೆಯಡಿಯ ಫಲಾನುಭವಿಗಳಿಗೆ ಸರಕಾರ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. 11 ಮತ್ತು 12 ನೇ ಕಂತಿನ ( Gruha Lakshmi 12th Installment ) ಹಣವನ್ನು ಮೊದಲ ಹಂತದಲ್ಲಿ 16ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದ್ದ ಕರ್ನಾಟಕ ಸರಕಾರ ಇದೀಗ ಎರಡನೇ ಹಂತದಲ್ಲಿ ಮತ್ತೆ 12 ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದೆ.
ನಿಮ್ಮ ಖಾತೆಗೂ ಹಣ ಜಮೆ ಆಗಿದ್ಯಾ ಚೆಕ್ ಮಾಡಿ.
ಕರ್ನಾಟಕದಲ್ಲಿ ಈಗಾಗಲೇ ಬಹುತೇಕರಿಗೆ 10 ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗಿದೆ. ಆದರೆ 11ನೇ ಕಂತಿನ ಹಣ ಹಲವರಿಗೆ ಜಮೆ ಆಗಿಲ್ಲ. ಇದೀಗ 11 ಮತ್ತು 12 ನೇ ಕಂತಿನ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಟ್ಟಿಗೆ ಜಮೆ ಮಾಡುತ್ತಿದೆ. ಹೀಗಾಗಿ ಈ ಕಂತಿನಲ್ಲಿ 2000 ರೂಪಾಯಿಯ ಬದಲು, 4000 ರೂಪಾಯಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಗೃಹಲಕ್ಷ್ಮೀ ಯೋಜನೆಯನ್ನು ಆರಂಭದಲ್ಲಿ ಏಕಕಾಲದಲ್ಲಿ ಎಲ್ಲಾ ಮಹಿಳೆಯರಿಗೆ ಪಾವತಿ ಮಾಡುತ್ತೇವೆ ಅಂತಾ ಹೇಳಿರುವ ಸರಕಾರ ಇದೀಗ ಹಂತ ಹಂತವಾಗಿ ಪಾವತಿ ಮಾಡಲು ಸಜ್ಜಾಗಿದೆ. ಈ ತಿಂಗಳು ಮೊದಲ ಕಂತಿನ ಹಣ ಪಾವತಿಸಿದ್ದು, ಇದೀಗ ಎರಡನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿದೆ. ಎರಡನೇ ಕಂತಿನಲ್ಲಿ ಬಿಡುಗಡೆ ಆಗಿರುವ ಜಿಲ್ಲೆಗಳು ಯಾವುವು ಎಂದು ನೋಡೋದಾದ್ರೆ.
ಬೆಂಗಳೂರು, ರಾಯಚೂರು, ಬಳ್ಳಾರಿ, ಬೀದರ್, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಕೋಲಾರ, ಹಾವೇರಿ, ಗದಗ, ಕಲಬುರಗಿ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಗೃಹಲಕ್ಷ್ಮೀಯರ ಖಾತೆಗೆ ಈಗಾಗಲೇ ಡಿಬಿಟಿ (DBT Transfer) ಮೂಲಕ ಹಣ ವರ್ಗಾವಣೆಯನ್ನು ಮಾಡಲಾಗಿದೆ. ಗೃಹಲಕ್ಷ್ಮೀಯರು ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.