Breaking News

ಬೆಸ್ಕಾಂ ಬೊಕ್ಕಸ ತುಂಬಿಸಿದ ಗೃಹ ಜ್ಯೋತಿ ಯೋಜನೆ; 10 ವರ್ಷಗಳಲ್ಲಿ ಆದಾಯ 3 ಪಟ್ಟು ಏರಿಕೆ

Spread the love

ಬೆಂಗಳೂರು, ಜುಲೈ 6: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನಗರಕ್ಕೆ ಮಾತ್ರವಲ್ಲದೆ ದಕ್ಷಿಣದ ಸುಮಾರು 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಸೇವೆ ನೀಡುತ್ತಿದೆ. ವಿದ್ಯುತ್ ಸಂಗ್ರಹಣೆ ವ್ಯತ್ಯಯ ಆದಾಗಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡಲು ಶ್ರಮಿಸಿದೆ. ಕಳೆದ 10 ವರ್ಷದ ಬೆಸ್ಕಾಂ ಆದಾಯದ ಅಂಕಿ ಅಂಶ ಬಿಡುಗಡೆ ಆಗಿದ್ದು, ಆದಾಯ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದು ದೃಢವಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗುತ್ತವೆ ಎಂಬ ಮಾತುಗಳ ಮಧ್ಯೆಯೇ, ಬೆಸ್ಕಾಂ 2023-24 ರ ಹಣಕಾಸು ವರ್ಷದಲ್ಲಿ 7 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಕಂಡಿರುವುದು ಗೊತ್ತಾಗಿದೆ

 

2013-14 ಹಣಕಾಸು ವರ್ಷದಲ್ಲಿ 11 ಸಾವಿರ ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮಾಡಿದ್ದ ಬೆಸ್ಕಾಂ ಬಳಿಕ ಪ್ರತಿವರ್ಷ ಲಾಭದ ಹಳಿಯಲ್ಲಿಯೇ ಇದೆ. ತದನಂತರ ಪ್ರಮುಖವಾಗಿ ಕಳೆದ 5 ವರ್ಷಗಳನ್ನು ಗಮನಿಸಿದಾಗ 2020-21ರಲ್ಲಿ 19, 233 ಕೋಟಿ, 2021-22ರಲ್ಲಿ 20,712 ಕೋಟಿ ಹಾಗೂ 2022-23ರಲ್ಲಿ 24,700 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಬಳಿಕ ಕಳೆದ ಹಣಕಾಸು ವರ್ಷ ಅಂದರೆ 2023-24ರಲ್ಲಿ ಬರೋಬ್ಬರಿ 31,378 ಕೋಟಿ ರೂಪಾಯಿಗಳ ಭರ್ಜರಿ ಆದಾಯ ಕಂಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಬೆಸ್ಕಾಂ, ಬೇರೆ ಎಲ್ಲಾ ಸರ್ಕಾರದ ಸಂಸ್ಥೆಗಳು ನಷ್ಟ ಸುಳಿಯಲ್ಲಿ ಇರುವಾಗ ಬೆಸ್ಕಾಂ ಮಾತ್ರ ಆದಾಯದಲ್ಲಿರುವುದು ಸಂತೋಷ ಮತ್ತು ಬೆಸ್ಕಾಂ ಪ್ರತಿವರ್ಷವೂ ದರ ಹೆಚ್ಚಳ ಮಾಡುತ್ತದೆ. ಆದರೆ ಗ್ರಾಹಕರಿಗೆ ಹೊರೆ ಆಗದ ರೀತಿಯ 20 ರಿಂದ 30 ಪೈಸೆಯಷ್ಟು ಹೆಚ್ಚಳ ಮಾಡುತ್ತದೆ ಎಂದಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ