Breaking News

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

Spread the love

ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, ಪಟ್ಟಣದ ಇಂಚಲ ರಸ್ತೆಯಲ್ಲಿನ ಕ್ಲಿನಿಕ್‌ಗೆ ಕಾಲಿಟ್ಟರೆ ನಿಮಗೆ ಅಚ್ಚರಿಯಾಗುತ್ತದೆ. ಇಲ್ಲಿ ವೈದ್ಯ ಡಾ.ಎ.ಎನ್.ಬಾಳಿ ತಮ್ಮ ಬಳಿ ಚಿಕಿತ್ಸೆಗಾಗಿ ಬರುವ ರೋಗಿಗಳಿಂದ ಪಡೆಯುವುದು ₹10 ಮಾತ್ರ.

ಬೈಲಹೊಂಗಲದಲ್ಲಿ ಇದ್ದಾರೆ 'ಹತ್ತು ರೂಪಾಯಿ' ಡಾಕ್ಟ್ರು

ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿಯಲ್ಲಿ ಸಹಾಯಕ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸೆಕರಾಗಿ ಸೇವೆ ಸಲ್ಲಿಸಿ, ಅವರು ನಿವೃತ್ತಿ ಹೊಂದಿದ್ದಾರೆ. 31 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನಂತರ ಅವರು ಕೈಕಟ್ಟಿ ಕುಳಿತಿಲ್ಲ.

ಬದಲಿಗೆ, ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಶ್ರಮಿಸುತ್ತಿದ್ದಾರೆ. ‘ಹತ್ತು ರೂಪಾಯಿ ಡಾಕ್ಟ್ರು’ ಎಂದೇ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಆಸ್ಪತ್ರೆ ಸದಾ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಇಲ್ಲಿ ಚಿಕಿತ್ಸೆಗಾಗಿ ಬೈಲಹೊಂಗಲ ತಾಲ್ಲೂಕು ಮಾತ್ರವಲ್ಲ; ಜಿಲ್ಲೆಯ ವಿವಿಧೆಡೆಯಿಂದ ರೋಗಿಗಳು ಬರುತ್ತಾರೆ.

‘ನನಗೀಗ 84 ವರ್ಷ ವಯಸ್ಸು. 26 ವರ್ಷಗಳ ಹಿಂದೆ ಸ್ವಂತ ಕ್ಲಿನಿಕ್ ತೆರೆದಿದ್ದೇನೆ. ₹10 ಶುಲ್ಕ ಪಡೆದು, ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದೇನೆ. ಇದರಲ್ಲಿ ನನಗೂ ಏನೋ ಸಂತೃಪ್ತಿ. ನನ್ನ ಪತ್ನಿ, ವೈದ್ಯರಾಗಿರುವ ಮಗ ಮತ್ತು ಸೊಸೆಯೂ ನನ್ನ ಸೇವೆಗೆ ಬೆಂಬಲ ನೀಡಿದ್ದಾರೆ’ ಎಂದು ಎ.ಎನ್.ಬಾಳಿ ‘ ತಿಳಿಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ