Breaking News
Home / ರಾಜಕೀಯ / ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ವೇತನ ಹೆಚ್ಚಿಸಿ ಆದೇಶ

ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ವೇತನ ಹೆಚ್ಚಿಸಿ ಆದೇಶ

Spread the love

ಬೆಂಗಳೂರು, ಜೂನ್ 28: ಸಾರಿಗೆ ನಿಗಮಗಳ ನಿವೃತ್ತಿಯಾಗಿರುವ ನೌಕರರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಕಾರ್ಮಿಕ ಸಂಘಟನೆಗಳ ಮನವಿಯ ಬೆನ್ನಲ್ಲೇ, ನಿವೃತ್ತಿಯಾದ ನೌಕರರಿಗೂ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪರಿಣಾಮವಾಗಿ 2023ರ ಮಾರ್ಚ್​​ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ 15 ರಷ್ಟು ಹೆಚ್ಚುವರಿ ವೇತನ ಸಿಗಲಿದೆ.

2023 ರ ಮಾರ್ಚ್​​ನಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 2019 ರ ಡಿಸೆಂಬರ್ 31 ರಂದು ಅವರು ಪಡೆಯುತ್ತಿದ್ದ ಮೂಲವೇತನವನ್ನು ಪರಿಗಣಿಸಿ ಶೇ 15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿ ಪರಿಷ್ಕರಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಾಲ್ಕು ನಿಗಮಗಳಿಗೆ ಬೇಕು 220 ಕೋಟಿ ರೂ.

 

ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ವೇತನ ಹೆಚ್ಚಿಸಿ ಆದೇಶ

ನಿವೃತ್ತಿಯಾದ ನೌಕರರಿಗೆ ವೇತನ ಪರಿಷ್ಕರಣೆಯ ಹೆಚ್ಚಿಸಿದ ಹಣ ಕೊಡಲು ನಾಲ್ಕು ಸಾರಿಗೆ ನಿಗಮಗಳಿಗೆ ಅಂದಾಜು 220 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

 

2023 ರ ಮಾರ್ಚ್ 01 ರಂದು ಸಂಸ್ಥೆಯ ಸೇವೆಯಲ್ಲಿದ್ದ ಅಧಿಕಾರಿ ನೌಕರರಿಗೆ 2020 ರ ಜನವರಿ 1 ರಿಂದ 2023 ರ ಫೆಬ್ರವರಿ 28 ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಬೇಕು. ಈ ವರ್ಷದ ಕೊನೆಯಲ್ಲಿ ನಿವೃತ್ತಿ ನೌಕರರಿಗೆ ವೇತನ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಪ್ರವಾಹ ಎದುರಿಸಲು ಕ್ರಮ ಕೈಗೊಳ್ಳಿ: ತಹಶೀಲ್ದಾರ್‌ ಮಂಜುಳಾ ನಾಯಿಕ

Spread the love ಸಂಕೇಶ್ವರ: ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ರಭಸದಿಂದ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸಂಕೇಶ್ವರ ಪಟ್ಟಣದ ಹರಿಯುವ ಹಿರಣ್ಯಕೇಶಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ