Breaking News
Home / ರಾಜಕೀಯ / ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

Spread the love

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 37ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ‌ ಥಾವರಚಂದ್ ಗೆಹ್ಲೋತ್ ಅವರು ಪದವೀಧರರಿಗೆ ಪ್ರಮಾಣ ಪತ್ರ ಪದಾನ ಮಾಡಿದರು.

ಬಿ.ಎಸ್ಸಿ (ಆನರ್ಸ್‌) ಕೃಷಿ ಸ್ನಾತಕ ಪದವಿ ಕೋರ್ಸ್‌ನಲ್ಲಿ ಶ್ರೀಯಾ ಎಸ್.ಕರಿ ಅವರು ಮೂರು ಚಿನ್ನದ ಪದಕ ಪಡೆದಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 933 ಮಂದಿ ವಿವಿಧ ಪದವಿ ಪೂರೈಸಿದ್ದಾರೆ. ಪಿಎಚ್.ಡಿ 69, ಸ್ನಾತಕೋತ್ತರ ಪದವಿ 237 ಹಾಗೂ ಸ್ನಾತಕ ಪದವಿ 627 ಮಂದಿ ಪಡೆದಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಪ್ರೊ.ಸಂಜಯ ಕುಮಾರ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

CBSE, ICSE ಸೇರಿ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Spread the love ಬೆಂಗಳೂರು: CBSE, ICSE, ಅಂತರರಾಷ್ಟ್ರೀಯ ಮಂಡಳಿ ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ