Breaking News

ಮಂಚೂರಿ, ಬಾಂಬೇ ಮಿಠಾಯಿ ಬಳಿಕ ಕಬಾಬ್‌ಗೂ ನಿಷೇಧ

Spread the love

ಬೆಂಗಳೂರು: ರಾಜ್ಯಾ ದ್ಯಂತ ವೆಜ್‌ ಕಬಾಬ್‌, ಕೋಳಿ ಹಾಗೂ ಮೀನಿನ ಕಬಾಬ್‌ ತಯಾರಿಗೆ ಕೃತಕ ಬಣ್ಣ ಉಪಯೋಗಿಸುವುದನ್ನು ನಿಷೇ ಧಿಸಿ ರಾಜ್ಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.

ನಿಯಮ ಉಲ್ಲಂಘಿಸಿದರೆ ಜೀವಾವಧಿವರೆಗೆ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಲಾಗಿದೆ.

 

ಕೋಳಿ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗುವ ದುಷ್ಪರಿ ಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ, ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 38 ಕಬಾಬ್‌ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ಪೈಕಿ 8 ಕಬಾಬ್‌ ಮಾದರಿಗಳು ಕೃತಕ ಬಣ್ಣಗಳಿಂದ ಕೂಡಿರುವುದು ಪತ್ತೆಯಾಗಿದೆ.

ಜೀವಾವಧಿ ಜೈಲು,
10 ಲಕ್ಷ ರೂ. ದಂಡ
ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಕಾಯ್ದೆ 2011ರ ಅನ್ವಯ ಕಬಾಬ್‌ ತಯಾರಿಯಲ್ಲಿ ಯಾವುದೇ ಕೃತಕ ಬಣ್ಣವನ್ನು ಉಪಯೋಗಿ ಸುವಂತಿಲ್ಲ.

ಒಂದು ವೇಳೆ ನಿಯಮ ಉಲ್ಲಂ ಸಿ ಬಣ್ಣಗಳ ಬಳಕೆ ಮಾಡಿದ್ದಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಕನಿಷ್ಠ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ


Spread the love

About Laxminews 24x7

Check Also

ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ

Spread the loveಚಾಮರಾಜನಗರ, ಫೆಬ್ರವರಿ 05: ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ