ದರ್ಶನ್ ಕೊಲೆ ಆರೋಪದಲ್ಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದು, ಈಗಾಗಲೇ ಕಳೆದ 12 ದಿನಗಳಿಂದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಹೀಗಿದ್ದಾಗ ಇಂದು ಪೊಲೀಸರ ಕಸ್ಟಡಿ ಅಂತ್ಯ ಆಗಿದ್ದು, ದರ್ಶನ್ & ಗ್ಯಾಂಗ್‌ನ ಕೋರ್ಟ್ ಎದುರು ಪೊಲೀಸರು ಹಾಜರುಪಡಿಸಿದ್ದಾರೆ.
ಇದೇ ಸಮಯದಲ್ಲಿ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು? ಅನ್ನೋ ಚರ್ಚೆಯು ಶುರುವಾಗಿದೆ.
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್ ಈಗ ‘ಪರಪ್ಪನ ಅಗ್ರಹಾರ’ ಸೇರುವ ಟೈಂ ಹತ್ತಿರವಾಗಿದೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಅಮಾಯಕನ ಮರ್ಡರ್ ಕೇಸ್‌ನಲ್ಲಿ ದರ್ಶನ್ ಕೂಡ ಭಾಗಿ ಆಗಿದ್ದಾನೆ, ಕೊಲೆ ಆರೋಪದಲ್ಲಿ ದರ್ಶನ್‌ಗೆ ಕೂಡ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಗಂಭೀರ ಆರೋಪ ಎದುರಿಸುತ್ತಿರುವ ನಟ ದರ್ಶನ್ ಇದೀಗ ಕೋರ್ಟ್ ಎದುರು ಹಾಜರಾಗಿ, ಇನ್ನೇನು ‘ಪರಪ್ಪನ ಅಗ್ರಹಾರ’ ಜೈಲಿಗೆ ಹೋಗುತ್ತಾನಾ? ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ಹೋಗ್ತಾನಾ? ಅನ್ನೋದು ಗೊತ್ತಾಗಲಿದೆ. ಹೀಗಿದ್ದಾಗಲೇ ಮತ್ತೊಂದು ಭರ್ಜರಿ ಚರ್ಚೆ ಶುರು ಆಗಿದ್ದು, ದರ್ಶನ್ ಮುಂದಿನ ಸಿನಿಮಾದ ಹೆಸರು ಏನಾಗಿರಬಹದು? ಅನ್ನೋ ಚರ್ಚೆ ಇದೀಗ ನಡೆಯುತ್ತಿದೆ. ಹಾಗಾದ್ರೆ ದರ್ಶನ್ ಮುಂದಿನ ಸಿನಿಮಾ ಹೆಸರು ಏನು? ಮುಂದೆ ಓದಿ.