ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೆ ಸಂಚು ರೂಪಿಸಿದ್ದ ತಂಡವೊಂದನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಎರಡು ತಲ್ವಾರ್, ಎರಡು ಚಾಕು, ಎರಡು ಬೈಕ್ ಹಾಗೂ ಆಟೊ ವಶಪಡಿಸಿಕೊಂಡಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಹಳೇಹುಬ್ಬಳ್ಳಿ ನಿವಾಸಿಗಳಾದ ಮಂಜುನಾಥ ಪಾಂಚಾನ, ಪವನ ಗಬ್ಬೂರ, ವಿನಾಯಕ ದುಂಡಿ, ನಾಗರಾಜ ಮೀರಜಕರ, ರಾಜಪ್ಪ ಹನಮನಹಳ್ಳಿ ಬಂಧಿತರು.
ಮತ್ತೊಬ್ಬ ಆರೋಪಿ ಗಣೇಶ ಬಿಲಾನಾ ತಲೆಮರೆಸಿಕೊಂಡಿದ್ದಾನೆ.
ಹಳೇಹುಬ್ಬಳ್ಳಿಯ ಸಿಕ್ಕಲಗಾರ ಓಣಿಯ ನಿವಾಸಿ ದೀಪಕ ಧಾರವಾಡ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಜೂನ್ 19ರಂದು ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ತಿಮ್ಮಸಾಗರ ಓಣಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
Laxmi News 24×7