ಹುಕ್ಕೇರಿ: ಪಟ್ಟಣದ ಹೊರವಲಯ ಕ್ಯಾರಗುಡ್ ಬಳಿಯ ಔಜೀಕರ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ಬುಧವಾರ ನೀಡಿದರು.
ಮಠದ ಪೀಠಾಧಿಪತಿ ಮಲ್ಲಪ್ಪ ಮಹಾರಾಜರು, ಮಠದ ಅಭಿನವ ಮಂಜುನಾಥ ಸ್ವಾಮೀಜಿ ಅವರು ಸಚಿವ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಚಿವರು, ‘ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವಲ್ಲಿ ಈ ಆಶ್ರಮ ಅಮೂಲ್ಯ ಕೊಡುಗೆ ನೀಡುತ್ತಿದೆ. ಸಮಾಜದ ಬೆಳವಣಿಗೆಗೆ ಮತ್ತು ಧರ್ಮ ಪ್ರಸಾರದಲ್ಲಿ ಶ್ರೀಮಠವು ತೊಡಗಿಸಿಕೊಂಡಿರುವುದು ಅತ್ಯಂತ ಸಮಂಜಸ. ಮಠದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
Laxmi News 24×7