Breaking News

₹2.30 ಲಕ್ಷಕ್ಕೆ ಎರಡು ಮೇಕೆ ಮಾರಾಟ

Spread the love

ರಾಯಬಾಗ(ಬೆಳಗಾವಿ ಜಿಲ್ಲೆ): ಬಕ್ರೀದ್‌ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ರೈತ ಮಹೇಶ ಖೋತ ಅವರಿಗೆ ಸೇರಿದ ಎರಡು ಮೇಕೆಗಳು ಒಟ್ಟು ₹2.30 ಲಕ್ಷಕ್ಕೆ ಮಾರಾಟವಾಗಿವೆ.

‘ಸಾಮಾನ್ಯವಾಗಿ ಮೇಕೆ ದರ ₹10 ಸಾವಿರ ದಿಂದ ₹25 ಸಾವಿರ ಇರುತ್ತದೆ. ಆದರೆ ನನ್ನ ಎರಡೂ ಮೇಕೆಗಳು ಕ್ರಮವಾಗಿ ₹1.20 ಲಕ್ಷ ಮತ್ತು ₹1.10 ಲಕ್ಷಕ್ಕೆ ಮಾರಾಟವಾಗಿವೆ.

ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಗ್ರಾಹಕರು ಖರೀದಿಸಿದರು’ ಎಂದು ಮಹೇಶ ಖೋತ ತಿಳಿಸಿದರು.

‘ನಮ್ಮದು ಅವಿಭಕ್ತ ಕುಟುಂಬ. 25 ಹೆಣ್ಣು ಮತ್ತು 12 ಗಂಡು ಮೇಕೆಗಳಿವೆ. ಈದ್‌ ಉಲ್‌ ಫಿತ್ರ್, ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಮಾರಲು ಮೇಕೆಗಳನ್ನು ಸಾಕುತ್ತೇವೆ’ ಎಂದರು.

‘ರಾಯಬಾಗ ತಾಲ್ಲೂಕಿನ ಮೇಕೆಗಳಿಗೆ ಹೆಚ್ಚು ಬೇಡಿಕೆಯಿದೆ. ಬಕ್ರೀದ್ ಹಿನ್ನೆಲೆಯಲ್ಲಿ ದುಬಾರಿ ಬೆಲೆ ಕೊಟ್ಟು ಗ್ರಾಹಕರು ಖರೀದಿಸುತ್ತಾರೆ’ ಎಂದು ಪಶು ವೈದ್ಯಾಧಿಕಾರಿ ಡಾ.ಪ್ರದೀಪ ಮೊಳವಾಡ ಹೇಳಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ