ಬೆಂಗಳೂರು: ಮಗನ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕುತ್ತಾ ಮಗನ ಎದುರೇ ತಾಯಿ ಸೆಲ್ಫಿ ವೀಡಿಯೋ ಮಾಡುತ್ತಾ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್ ಆರುಂಧತಿ ನಗರದ 11 ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ನಡೆದಿದೆ.
ಫಾತೀಮಾ (30) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ತಾಯಿ ರಫೀಕಾ ಬೇಗಂ, ಅಣ್ಣ ಜಾಫರ್, ಅತ್ತಿಗೆ ಸಮೀನಾ, ಅಕ್ಕ ಆಯೇಷಾ ಬಾನು, ಆಕೆ ಪುತ್ರ ಸೈಯದ್ ಕಲೀಲ್ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ.
ಕಳೆದ ಐದಾರು ವರ್ಷಗಳಿಂದ ದುಬೈ, ಕುವೈತ್ ಮನೆಗೆಲಸ ಮಾಡಿ ಹಣ ಕೂಡಿಟ್ಟಿದ್ದೆ. 9 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಬಂಧಿಕರೇ ಕಬಳಿಸಿದ್ದಾರೆ ಎಂದು ಫಾತಿಮಾ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಸಿದ್ದಾರೆ.ವಿಷ ಸೇವಿಸಿ ಅಸ್ವಸ್ಥರಾದ ಫಾತೀಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾತೀಮಾ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.