Breaking News

ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಅನ್ನೋದು ಮುಖ್ಯ: ಕಿಚ್ಚ

Spread the love

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಾಂಟ್ರವರ್ಸಿಗಳೇ ಮೇಳೈಸುತ್ತಿವೆ. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ಸುದ್ದಿಯಿಂದ ಶುರುವಾದ ಈ ವಿವಾದದ ಬಿಸಿಗಾಳಿ, ಅದಾದ ಬಳಿಕ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಅವರ ಡಿವೋರ್ಸ್‌ ವಿಚಾರವೂ ಮುನ್ನೆಲೆಗೆ ಬಂದಿತು.

ದೊಡ್ಮನೆಯ ದಂಪತಿ ನಡುವೆಯೂ ಭಿನ್ನಾಭಿಪ್ರಾಯಗಳಿವೆಯೇ? ಎಂಬ ಅನುಮಾನವೂ ಅಭಿಮಾನಿ ವಲಯದಲ್ಲೂ ಬಿಸಿ ಬಿಸಿ ಚರ್ಚೆಯಾಯ್ತು. ಇವೆರಡರ ನಡುವೆ ನಟ ದರ್ಶನ್‌ ಮತ್ತವರ ಗ್ಯಾಂಗ್‌ನಿಂದ ನಡೆ ಕೊಲೆ ಇವೆಲ್ಲವನ್ನೂ ಮೀರಿಸಿತು. ಹೀಗಿರುವಾಗಲೇ ಈ ಮೊದಲು ನಟ ಕಿಚ್ಚ ಸುದೀಪ್‌ ಆಡಿದ ಮಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ವೈರಲ್‌ ಆಗುತ್ತಿದೆ.

ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ, ದರ್ಶನ್‌ ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ, ಆತನನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಲಾಗಿತ್ತು. ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿನ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಮೈ ಕೈ ಮೂಳೆ ಮುರಿದು, ಸಿಗರೇಟ್‌ನಿಂದ ಸುಟ್ಟು, ಮರ್ಮಾಂಗಕ್ಕೆ ಬಲವಾಗಿ ಒದ್ದು ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಹಾಗೆ ಎಸೆದು ಹೋದ ದುರುಳರೀಗ ಸಾಕ್ಷಿ ಸಮೇತ ಪೊಲೀಸರ ವಶದಲ್ಲಿದ್ದಾರೆ. ನಟ ದರ್ಶನ್‌ ಸೇರಿ 17 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕಿಚ್ಚ ಸುದೀಪ್‌ ಮಾತು ವೈರಲ್‌

ಕಳೆದ ಕೆಲ ತಿಂಗಳ ಹಿಂದೆ ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಅದ್ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಗಳು ಕಾದಿದ್ದೇ ಬಂತು. ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಬಗ್ಗೆ ಸಾಕಷ್ಟು ಫ್ಯಾನ್ಸ್‌ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ, ಸುದೀಪ್‌ ಮತ್ತು ದರ್ಶನ್‌ ಒಂದಾಗದಿರುವುದೇ ಒಳಿತು ಎಂಬ ಮಾತು ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ. ಅದಕ್ಕೆ ಕಾರಣ; ನಟ ದರ್ಶನ್‌ ಮತ್ತವರ ಗ್ಯಾಂಗ್‌ ನಡೆಸಿದ ಕೃತ್ಯ! ನಿಮ್ಮ ಅಭಿಮಾನಿಗಳಾಗಿದ್ದ ನಾವೇ ಪುಣ್ಯವಂತರು ಎಂದೂ ಕೆಲವರು ನಟ ಸುದೀಪ್‌ ಅವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಈ ನಡುವೆಯೇ ಕಿಚ್ಚ ಸುದೀಪ್‌ ಈ ಹಿಂದೆ ಹೇಳಿದ ರಾಜನ ಕಥೆಯೂ ಇದೀಗ ವೈರಲ್‌ ಆಗುತ್ತಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ