ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವರ ಹತ್ಯೆ ಮಾಡಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 14 ಜನರ ಬಂಧನವಾಗಿದೆ. ನಟ ಅರೆಸ್ಟ್ ಆದ ಬೆನ್ನಲ್ಲೆ, ಡೇವಿಲ್ ಸಿನಿಮಾ ನಿರ್ಮಾಪಕರು ಸೇರಿದಂತೆ, ಅವರ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ.
ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ದರ್ಶನ್‌ಗೆ ಬೆಲ್ ಸಿಗೋದು ಡೌಟ್ ಎನ್ನಲಾಗಿದೆ..
ಹಾಗದ್ರೆ ದರ್ಶನ್ ಅಭಿನಯಿಸಬೇಕಿರುವ ಸಿನಿಮಾಗಳು ಯಾವುವು? ಯಾವ ಯಾವ ನಿರ್ಮಾಪಕರಿಂದ ಸಿನಿಮಾ ಮಾತುಕಥೆ ಆಗಿದೆ..? ಯಾವ ಯಾವ ಪ್ರಾಡ್ಯೂಜರ್ ಹತ್ತಿರ ಅಡ್ವಾನ್ಸ್ ಹಣ ಪಡೆದಿದ್ದಾರೆ ಗೊತ್ತಾ..? ಎಂಬ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ..
:ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪು
ಕಾಟೇರ ಸಿನಿಮಾ ಸಕ್ಸಸ್ ಬಳಿಕ ದರ್ಶನ್ ಅಭಿನಯಿಸುತ್ತಿರುವ ನಿರೀಕ್ಷಿತ ಚಿತ್ರ ಡೆವಿಲ್ ದ ಹೀರೋ. ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿದ್ದರು. ಇತ್ತೀಚಿಗೆ ಈ ಚಿತ್ರ ಟೀಸರ್ ನಿಂದಲೇ ಕೌತುಕ ಹುಟ್ಟಿಸಿತ್ತು. ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಮುಗಿಸಿದೆ.
ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಯಿ ಮುರಿದುಕೊಂಡ ಕಾರಣ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಿನ್ನೆ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು, ಆದರೆ ಅಷ್ಟರಲ್ಲಿ ಅವರು ಪೊಲೀಸರ ಅತಿಥಿಯಾಗಿದ್ದಾರೆ.