ಹಂದಿಗುಂದ: ಸಮೀಪದ ಪಾಲಬಾವಿಯಲ್ಲಿ ಸೋಮವಾರ ರಾತ್ರಿ ಬೈಕುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ಮೃತಪಟ್ಟಿದ್ದಾನೆ.
ಸುಲ್ತಾನಪುರ ಗ್ರಾಮದ ರಾಘವೇಂದ್ರ ರಾಮಪ್ಪ ಹಾದಿಮನಿ (28) ಮೃತ ವ್ಯಕ್ತಿ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಬಾವಿ ಗ್ರಾಮದಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಅಪಘಾತ ನಡೆದಿದೆ.
ಹಿಂಬದಿಯ ಸವಾರ ಸೌರಭ ತುಕಾರಾಮ ಮಾದರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಾರೂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾರೂಗೇರಿ ಸಿಪಿಐ ರವಿಚಂದ್ರನ ಬಡಪಕೀರಪ್ಪನವರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಯವರು ತನಿಖೆ ಕೈಗೊಂಡಿದ್ದಾರೆ.