Breaking News

ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ ವರವಿಕೊಳ್ಳ ಜಲಪಾತ

Spread the love

ಮುನವಳ್ಳಿ : ನಿಸರ್ಗದ ಮಡಿಲಲ್ಲಿರುವ ವರವಿಕೊಳ್ಳ ಜಲಪಾತ ಮಳೆಗಾಲದಲ್ಲಿ ಮೈತುಂಬಿ ಸುಮಾರು 200 ಅಡಿ ಎತ್ತರದಿಂದ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯ ಅದ್ಭುತವಾಗಿದೆ. ಜಲಪಾತದ ಅಡಿಯ ಗವಿಯಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನವಿದೆ. ತಿಂಡಿ, ಊಟ, ವಸತಿಗಾಗಿ ಮುನವಳ್ಳಿಯಲ್ಲಿ ಉತ್ತಮವಾದ ಹೊಟೇಲ್, ಲಾಡ್ಜ್ ಗಳ ಅನುಕೂಲತೆ ಇದೆ.

ಜಲಪಾತಕ್ಕೆ ಹೋಗುವ ದಾರಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಿಂದ ನರಗುಂದ ಮಾರ್ಗವಾಗಿ 4 ಕಿಮೀ ಕ್ರಮಿಸಬೇಕು, ನಂತರ ವರವಿಕೊಳ್ಳ ಜಲಪಾತದ ಮಾರ್ಗಸೂಚಿ ಫಲಕದಿಂದ 2 ಕಿಮೀ ಕ್ರಮಿಸಬೇಕು. ಪ್ರಸಿದ್ಧ ಪುಣ್ಯಕ್ಷೇತ್ರ ಯಕ್ಕೇರಿ ಕರೆಮ್ಮ ದೇವಸ್ಥಾನಕ್ಕಿಂತ 1 ಕಿ.ಮೀ. ಮೊದಲೇ ವರವಿಕೊಳ್ಳ ಜಲಪಾತ ತಿರುವು ರಸ್ತೆ ಇದೆ. ಕಚ್ಚಾ ರಸ್ತೆ ಇದ್ದರೂ ಜಲಪಾತದ ವರೆಗೆ ವಾಹನ ಸಂಚಾರಕ್ಕೆ ಅನುಕೂಲಕರವಿದೆ. ಗುಡ್ಡದ ಮೇಲೆ ಅಡ್ಡಾಡಲು ಬಹಳ ಮಜವೆನಿಸುತ್ತದೆ. ಪ್ರವಾಸಿಗರಿಗೆ ಅನುಕೂಲವಾಗಲೆಂದು ಮಾರ್ಗಸೂಚಿ ಫಲಕವನ್ನು ಅಳವಡಿಸಲಾಗಿದೆ. ಸವದತ್ತಿಯಿಂದ ಮುನವಳ್ಳಿ ಮಾರ್ಗವಾಗಿ 20 ಕಿಮೀ ಕ್ರಮಿಸಬೇಕು.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ