ಜೇವರ್ಗಿ: ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಹೊಲಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯೊಬ್ಬರು ವಿದ್ಯುತ್ ತಂತಿ ತಗುಲು ಮೃತಪಟ್ಟಿದ್ದಾರೆ,
ಮೃತಳನ್ನು ರೇಣುಕಾಬಾಯಿ ಭಾಗಣ್ಣ ನಾಟೀಕಾರ (37) ಬಳ್ಳುಂಡಗಿ ಎಂದು ಗುರುತಿಸಲಾಗಿದೆ.
ರೇಣುಕಾಬಾಯಿ ಅವರು ಗ್ರಾಮದ ಹೊಲಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು.
ಈ ವೇಳೆ ಮಳೆ-ಗಾಳಿಯಿಂದ ಹರಿದು ನೆಲಕ್ಕೆ ಬಿದ್ದ ವಿದ್ಯುತ್ ಎಲ್‌ಟಿ ಲೈನ್ ತುಳಿದು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ: ಮೃತ ರೇಣುಕಾಬಾಯಿ ನಾಟೀಕಾರ ಅವರ ನಿಧನದಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಕ್ಕಳು ಅನಾಥರಾಗಿದ್ದಾರೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಗಜಾನಂದ ಬಿರಾದಾರ ಭೇಟಿ ನೀಡಿದ್ದು, ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.