ಮೈಸೂರು, ಜೂ.10- ಆಪ್ತ ಸಹಾಯಕನೇ ಅನ್ನದಾನೇಶ್ವರ ಮಠದ ಸ್ವಾಮೀಜಿಯವರನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾನಂದ ಸ್ವಾಮೀಜಿ(90) ಕೊಲೆಯಾದ ಹಿರಿಯ ಶ್ರೀಗಳು.
ಕಳೆದ ಹಲವಾರು ವರ್ಷಗಳಿಂದ ರವಿ ಎಂಬಾತ ಸ್ವಾಮೀಜಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಶ್ರೀಗಳ ಕೆಲಸ ಕಾರ್ಯಗಳಿಗೆ ನೆರವಾಗಿದ್ದ ಸಿದ್ದಾರ್ಥ ನಗರದಲ್ಲಿರುವ ಮಠದಲ್ಲೇ ನೆಲೆಸಿದ್ದು, ಶ್ರೀಗಳ ಯೋಗಕ್ಷೇಮ, ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ.
ಆದರೆ ಇದ್ದಕ್ಕಿದ್ದಂತೆ ಶ್ರೀಗಳನ್ನು ಕೊಲೆ ಮಾಡಿರುವುದು ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. ಶ್ರೀಗಳು ಮಲಗಿದ್ದಾಗ ಕೋಣೆಗೆ ಬಂದ ರವಿ(60) ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.