Breaking News

ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ

Spread the love

ವಿಜಯಪುರ: ಭಾರಿ ಆರ್ಭಟದೊಂದಿಗೆ ಜಿಲ್ಲೆಯನ್ನು ಪ್ರವೇಶಿಸಿರುವ ಮೃಗಶಿರ ಮಳೆ ಶನಿವಾರವೂ ಮುಂದುವರೆದಿದೆ. ನಿನ್ನೆ 32.7 ಮಿ.ಮೀ. ಮಳೆಯಾಗಿದ್ದರೆ, ಇಂದು 12.16 ಮಿ.ಮೀ. ಮಳೆಯಾಗಿದೆ. ಸಿಡಿಲಿಗೆ ಎಮ್ಮೆಗಳು ಬಲಿಯಾಗಿದ್ದರೆ, ಭಾರಿ ಮಳೆಗೆ ಹತ್ತಾರು ಮನೆಗಳು ನೆಲಕ್ಕೆ ಉರುಳಿವೆ.

ಡೋಣಿ ನದಿ ಸೇರಿದಂತೆ ಹಳ್ಳಗಳು ಮೈದುಂಬಿ ಹರಿಯುತ್ತಿವೆ.

ಅಬ್ಬರದ ಮಳೆಗೆ ಚಡಚಣದಲ್ಲಿ ಶನಿವಾರ ಸಂಜೆ ಬಡಿದ ಸಿಡಿಲಿಗೆ ದುಂಡಪ್ಪ ನಿರಾಳೆ ಎಂಬವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದ್ದು, ಪಕ್ಕದಲ್ಲಿದ್ದ ಮೇವಿನ ಬಣವೆಗೂ ಬಂಎಕಿ ಹೊತ್ತಿಕೊಂಡಿದೆ. ಚಡಚಣ ಭಾಗದಲ್ಲೇವಿಠ್ಠಲ ಅಗಸರ ಎಂಬವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಸಾವಿಗೀಡಾಗಿದೆ.

ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಶರಣಪ್ಪ ಯಂಕಂಚಿ ಎಂಬವರಿಗೆ ಸೇರಿದ ಕುರಿ ಬಲಿಯಾಗಿದೆ. ಜಿಲ್ಲೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಜನ ವಸತಿಯ ಮಣ್ಣಿನ ಕಟ್ಟಡಗಳು ಬೀಳು ಆರಂಭಿಸಿವೆ.Vijayapura: ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ

ವಿಜಯಪುರ ಒಂದೇ ಭಾಗದಲ್ಲಿ 8 ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ನೆಲಕ್ಕುರುಳಿವೆ. ಬಸವನಬಾಗೇವಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಿದ್ದವ್ವ ವಾಲೀಕಾರ ಹಾಗೂ ತಂಗೆವ್ವ ಒಂಟಗುಡಿ ಎಂಬವ ಮನೆಗಳು ಮೇಲ್ಛಾವಣಿ, ಗೋಡೆಗಳು ಬಿದ್ದು ಮನೆಗಳು ಹಾನಿಯಾಗಿವೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಜಿಲ್ಲೆಯಾದ್ಯಂತ 32.7 ಮಿ.ಮೀ. ಮಳೆಯಾಗಿದ್ದರೆ, ಶನಿವಾರ ಬೆಳಗಿನ ವರೆಗೆ ಕಳೆದ 24 ಗಂಟೆಯಲ್ಲಿ ಮತ್ತೆ 12.6 ಮಿ.ಮೀ. ಮಳೆಯಾಗಿದ್ದು, ಸಂಜೆಯ ವರೆಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮತ್ತೆ ಮಳೆ ಸುರಿದಿದೆ.

ಶನಿವಾರ ಬೆಳಗಿನ ವರೆಗಿನ 24 ಗಂಟೆ ಅವಧಿಯಲ್ಲಿ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ 85 ಮಿ.ಮೀ. ಮಳೆಯಾಗಿದ್ದರೆ, ಕೊಲ್ಹಾರ ತಾಲೂಕಿಕ ಕೂಡಗಿ ಭಾಗದಲ್ಲಿ 70.5 ಮಿ.ಮೀ. ಮಳೆಯಾಗಿದೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಭಾಗದಲ್ಲಿ 61.5 ಮಿ.ಮೀ. ಮಳೆಯಾಗಿದ್ದರೆ, ಸಿಂದಗಿ ತಾಲೂಕಿನ ಗುಬ್ಬೇವಾಡ ಪರಿಸರದಲ್ಲಿ 56.5 ಮಿ.ಮೀ. ಮಳೆ ಸುರಿದಿದೆ.


Spread the love

About Laxminews 24x7

Check Also

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Spread the love ಉಡುಪಿ:* ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ