ಹುಬ್ಬಳ್ಳಿ: ಮಳೆಗಾಲ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಹಾಗೂ ಸೊಳ್ಳೆ ಹೆಚ್ಚಾಗುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಸಾಂಕ್ರಾಮಿಕ ರೋಗ ತಡೆಗಟ್ಟವ ನಿಟ್ಟಿನಲ್ಲಿ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್ ಗಳಲ್ಲಿ ಫೋಗಿಂಗ ಹಾಗೂ ಕ್ರಿಮಿನಾಶಕ ಔಷಧ ಸಿಂಪಡಣೆ ಕಾರ್ಯ ನಡೆಯಿತು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ಮುಂದಾಳತ್ವದಲ್ಲಿ ಆರೋಗ್ಯ ನಿರೀಕ್ಷಕರ, ಪೌರಕಾರ್ಮಿಕರ ಸಹಾಯದಿಂದ ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ ಎಂದು ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಆರೋಗ್ಯ ನಿರೀಕ್ಷಕರಾದ ಮಧುಕೇಶ್ವರ ರಾಯ್ಕರ್, ಸಿದ್ಧಾರ್ಥ ನಿಡವಣಿ, ಶಿವಕುಮಾರ, ಜ್ಯೋತಿ ನರೇಂದ್ರ, ಮ್ಯಾಗೇರಿ, ತಹಸೀನ, ಶಾಂತಗೌಡ ಬಿರಾದಾರ, ಕಾಡದೇವರಮಠ, ಪದ್ಮಾವತಿ, ಸಿದ್ದಾರ್ಥ್, ಭದ್ರೆಗೌಡ, ಶೇಖಪ್ಪ ಲಮಾಣಿ, ಪ್ರಶಾಂತ್ ಶಿವಮಗ್ಗಿ, ದೀಪಿಕಾ, ಮಲ್ಲಿಕಾರ್ಜುನ, ಪೂಜಾ ಇಚ್ಚಂಗಿ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.
Laxmi News 24×7