Breaking News

ಬೈಕ್ ಗೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿ: ಬೈಕ್ ಸವಾರ ದುರ್ಮರಣ

Spread the love

ಬೆಳಗಾವಿ: ಬೆಳಗಾವಿ – ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಸಾರಿಗೆ ಬಸ್ ಪಲ್ಟಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ಖನಗಾಂವ ಕೆ.ಎಚ್. ಗ್ರಾಮದ ಬಳಿ ಸಂಭವಿಸಿದೆ.

ತಾಲೂಕಿನ ಸುಳೇಭಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

 

ಬೆಳಗಾವಿಯಿಂದ ಗೋಕಾಕ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಹಾರಿ ಹೊಲದಲ್ಲಿ ಸುಮಾರು 30 ಅಡಿ ದೂರದಲ್ಲಿ ಬಿದ್ದಿದ್ದಾನೆ.

ಬೈಕ್‌ ಗೆ ಡಿಕ್ಕಿ ಹೊಡೆದ ಬಸ್ ಮುಂದೆ ಹೋಗಿ ಹೊಲದಲ್ಲಿ ಪಲ್ಟಿಯಾಗಿದೆ. ಬಸ್‌ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಾರೀಹಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ