ಎಸ್ಸಿ ನಾಯಕರನ್ನು ತುಳಿದಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ,
ನಾನು ಯಾರನ್ನೂ ತುಳಿಯುವ ಪ್ರಶ್ನೆ ಇಲ್ಲ. ಚುನಾವಣೆಗೆ ಮೂರು ದಿನ ಇದ್ದಾಗಲೇ ಯಾರ ಕೈಗೂ ಶಾಸಕ ಸಿಕಿಲ್ಲ.
ಸರಿಯಾಗಿ ಚುನಾವಣೆ ಮಾಡಲಿಲ್ಲ, ನಾನೇ ಇದ್ದು ಅವರನ್ನ ನೋಡಿದ್ದೇನೆ. ಅವರಿಗೆ ಟಿಕೇಟ್ ನಾವೇ ಕೊಡಿಸಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಮ್ಮ ಮಾವನ ಪರವಾಗಿ ಕೆಲಸವನ್ನು ಮಾಡಿದ್ದಾರೆ ಎಂದರು.
ಶಾಸಕ ಪಕ್ಷ ವಿರೋಧಿ ಕೆಲಸ ಮಾಡಿದರೂ ಕಾರ್ಯಕರ್ತರು ಪಕ್ಷ ಬಿಡಲಿಲ್ಲ. ಅವರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ
, ಮುಗಿದ ಹೋಗಿರುವ ಅಧ್ಯಾಯ. ಅವರು ವಿರೋಧ ಮಾಡಿದರೂ ನಮಗೆ ಗೆಲುವಾಗಿದೆ. ಶಾಸಕನ ಕಾರ್ಯವನ್ನು ಕೊನೆ ಗಳಿಗೆಯಲ್ಲಿ ನಾನೆ ನೊಡಿದ್ದೇನೆ.
ಚುನಾವಣೆಗೆ ಎರಡು ದಿನ ಮುನ್ನ ತಮ್ಮಣ್ಣವರ್ ಎಲ್ಲಿ ಹೋದರು? ಎಷ್ಟು ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದಾರೆ ಹೇಳಲಿ ಎಂದು ಸತೀಶ್ ಜಾರಕಿಹೊಳಿ ಸವಾಲೆಸೆದರು.