ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ಮುಖ್ಯಸ್ಥರಾದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಅದೃಷ್ಟ ಕೈಹಿಡಿದಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರ ವಿರುದ್ಧ ಗೆದ್ದು ಬೀಗಿರುವ ಡಾ. ಸಿ.ಎನ್. ಮಂಜುನಾಥ್ ಅವರಿಗೆ, ಕೇಂದ್ರ ಆರೋಗ್ಯ ಸಚಿವನ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿ ಆಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಈ ಕಾರಣಕ್ಕೆ ಬಿಜೆಪಿ ನಾಯಕರ ಮಾಸ್ಟರ್ ಪ್ಲಾನ್ ವರ್ಕೌಟ್ ಆಗಿತ್ತು. ದಳಪತಿಗಳ ಬೆಂಬಲ ಪಡೆದು, ಹಾಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಡಾ. ಮಂಜುನಾಥ್ ಅವರನ್ನ ಕಣಕ್ಕಿಳಿಸಿದ್ದರು. ಲೋಕಸಭೆ ಚುನಾವಣೆಯ 2024ರ ಅಖಾಡದಲ್ಲಿ ಡಾ. ಮಂಜುನಾಥ್ ಭರ್ಜರಿ ಗೆಲುವು ಕೂಡ ಪಡೆದಿದ್ದಾರೆ.
ಹೀಗಿದ್ದಾಗ ಡಾ. ಮಂಜುನಾಥ್ ಅವರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಆರೋಗ್ಯ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಹಾಗಾದ್ರೆ ಯಾವಾಗ ಅಧಿಕೃತ ಘೋಷಣೆ ಆಗಿ, ಡಾ. ಮಂಜುನಾಥ್ ಆರೋಗ್ಯ ಸಚಿವರು ಆಗಬಹುದು? ಡಾ. ಮಂಜನಾಥ್ ಅವರಿಗೆ ಸ್ಥಾನ ಸಿಕ್ಕರೆ ಕನ್ನಡ ನಾಡಿಗೆ ಏನೆಲ್ಲಾ ಲಾಭ ಆಗಲಿದೆ? ಬನ್ನಿ ತಿಳಿಯೋಣ.
ಆರೋಗ್ಯ ಸಚಿವರ ಸ್ಥಾನಕ್ಕೆ ಸೂಕ್ತ!
ಬಿಜೆಪಿ & ಎನ್‌ಡಿಎ ಒಕ್ಕೂಟದಲ್ಲಿ ಆಯ್ಕೆ ಆಗಿ ಬಂದಿರುವ ಸಂಸದರ ಹಿನ್ನೆಲೆ ಗಮನಿಸಿದರೆ ಇದೀಗ ಡಾ. ಸಿ.ಎನ್. ಮಂಜುನಾಥ್ ಆರೋಗ್ಯ ಸಚಿವರಾಗಲು ಸೂಕ್ತ ಅಂತಾ ಹೇಳಬಹುದು. ಯಾಕಂದ್ರೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವನ ಸ್ಥಾನ ನಿರ್ವಹಿಸಲು ವೈದ್ಯರ ಅಗತ್ಯತೆ ಇದೆ. ಈಗ ಈ ಅನಿವಾರ್ಯ ಸ್ಥಿತಿಯಲ್ಲಿ ಕನ್ನಡ ನಾಡಿನ ಸಂಸದ ಡಾ. ಸಿ.ಎನ್. ಮಂಜುನಾಥ್ ಆರೋಗ್ಯ ಸಚಿವರಾಗಿ ಕೆಲಸ ಮಾಡಲು ಎಲ್ಲಾ ರೀತಿಯಲ್ಲೂ ಸೂಕ್ತ ಎನ್ನಬಹುದು. ಹೀಗೆ ಪ್ರಧಾನಿ ಮೋದಿ ಅವರ ಮೊದಲ ಆಯ್ಕೆ ಕೂಡ ಡಾ. ಸಿ.ಎನ್. ಮಂಜುನಾಥ್ ಇರಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಕುಮಾರಸ್ವಾಮಿ ಕೃಷಿ ಸಚಿವರು?
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಎಂಬ ಕಾರಣಕ್ಕೆ ಜೆಡಿಎಸ್ ವರ್ಚಸ್ಸು ರಾಷ್ಟ್ರೀಯ ಮಟ್ಟದಲ್ಲೂ ಇದೆ. ಹೀಗಿದ್ದಾಗ ಕುಮಾರಸ್ವಾಮಿ ಅವರಿಗೂ ಎನ್‌ಡಿಎ ಒಕ್ಕೂಟ ಮಣೆಯನ್ನ ಹಾಕಿ ಕೃಷಿ ಸಚಿವರ ಸ್ಥಾನ ನೀಡುವ ನಿರೀಕ್ಷೆ ಇದೆ. ಇದರ ಜೊತೆ ಡಾ. ಸಿ.ಎನ್. ಮಂಜುನಾಥ್ ಕೂಡ ಕೇಂದ್ರ ಆರೋಗ್ಯ ಸಚಿವರಾಗಿ ಆಯ್ಕೆ ಆಗುವ ನಿರೀಕ್ಷೆ ಇದೆ. ಈ ಮೂಲಕ ಇದೀಗ ಕೇಂದ್ರದಲ್ಲಿ ದೇವೇಗೌಡರ ಕುಟುಂಬದ ಇಬ್ಬರು ಒಟ್ಟೊಟ್ಟಿಗೆ ಕೇಂದ್ರ ಸಚಿವರಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.