ಬೆಂಗಳೂರು, ಜೂನ್ 05: ಕರ್ನಾಟಕ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 2024ರಲ್ಲಿ ಮೂವರು ಮಹಿಳಾ ಮಣಿಗಳು ಸಂಸತ್‌ಗೆ ಆಯ್ಕೆ ಆಗಿದ್ದಾರೆ. ಒಟ್ಟು 28 ಮಂದಿ ಪೈಕಿ ಮೂವರು ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸಿದ್ದಾರೆ. ಬಾಕಿ 25 ಕ್ಷೇತ್ರಗಳಲ್ಲಿ ಪುರುಷ ಅಭ್ಯರ್ಥಿಗಳು ಗೆದ್ದಿದ್ದಾರೆ.
ಯಾರು ಯಾವ ಕ್ಷೇತ್ರ? ಯಾವ ಪಕ್ಷಗಳು?, ರಾಜಕೀಯ ಬೆಳವಣಿಗೆ ಬಗ್ಗೆ ಇಲ್ಲಿ ತಿಳಿಯಿರಿ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ಮತದಾನ ನಡೆಯಿತು. ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 17 ಕ್ಷೇತ್ರಗಳು, ಕಾಂಗ್ರೆಸ್ 9 ಹಾಗೂ ಜೆಡಿಸ್ ಪಕ್ಷ ಮೂರು ಸೀಟುಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿಯಿಂದ ಒಬ್ಬ ಮಹಿಳೆ ಹಾಗೂ ಕಾಂಗ್ರೆಸ್‌ನಿಂದ ಇಬ್ಬರು ಮಹಿಳೆಯರು ಬಹುಮತಗಳಿಂದ ಗೆದ್ದು ಸಂಸತ್‌ಗೆ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಮೊದಲ ಭಾರಿಗೆ ಪ್ರಿಯಾಂಕಾ ಜಾರಕಿಹೊಳಿ ಇವರಿಬ್ಬರು ಸಂಸತ್‌ಗೆ ಆಯ್ಕೆಯಾದ ಮಹಿಳೆಯರಾಗಿದ್ದಾರೆ. ಬಿಜೆಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಅವರು ಸಹ ಮಹಿಳೆಯರ ಗೆದ್ದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ.