ಮಂಡ್ಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುಮಲತಾ (Sumalatha) ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡಿದ್ದರಿಂದ ಆ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು.
ಸುಮಲತಾ ಬಿಜೆಪಿ ಸೇರಿದ್ದರಿಂದ ಮಂಡ್ಯ ಟಿಕೆಟ್ ಕೈತಪ್ಪಿತ್ತು. ಆದರೆ ಅವರಿಗೆ ವಿಧಾನ ಪರಿಷತ್ (Legislative Council) ಟಿಕೆಟ್ ಸಿಗಬಹುದು ಎಂದು ನಂಬಲಾಗಿತ್ತು. ಆದರೆ ಭಾನುವಾರ ಘೋಷಣೆ ಮಾಡಿದ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅಂಬರೀಶ್ ಹೆಸರಿಲ್ಲ. ಸುಮಲತಾ ಅಂಬರೀಶ್‌ಗೆ ಎಂಎಲ್‌ಸಿ ಮಾಡಿದ್ರೆ ಪಕ್ಷ ಸಂಘಟನೆಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಬಿಜೆಪಿ ನಿರ್ಧರಿಸಿದೆ.
ಸುಮಲತಾಗೆ ಮತ್ತೆ ನಿರಾಶೆ
ಅಲ್ಲದೆ ಘೋಷಣೆ ಮಾಡಿರುವ ಮೂರು ಟಿಕೆಟ್ಗಳನ್ನ ಜಾತೀ ಆಧಾರದಲ್ಲಿ ಮಾಡಲಾಗಿದೆ. ಒಕ್ಕಲಿಗ ಕೋಟದಲ್ಲಿ ಸುಮಲತಾಗಿಂತ ಸಿ.ಟಿ.ರವಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್‌ಗೆ ಮುಂದೆ ಅವಕಾಶ ಕೊಡಲು ಹೈಕಮಾಂಡ್ ಚಿಂತನೆ ಮಾಡಿದೆ ಎನ್ನಲಾಗಿದೆ. ಭಾನುವಾರ ಬಿಜೆಪಿ ವಿಧಾನ ಪರಿಷತ್ಗೆ ಸಿಟಿ ರವಿ, ಎನ್ ರವಿಕುಮಾರ್ ಹಾಗೂ ಎಂಜಿ ಮುಳೆಗೆ ಟಿಕೆಟ್ ನೀಡಿದೆ. ಸಿಟಿ ರವಿ ಕಳೆದ ವಿಧಾನಸಭೆಯಲ್ಲಿ ಸೋಲುಕಂಡಿದ್ದರು. ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಕೋಟಾ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ನೀಡಿತ್ತು.