Breaking News

ಪರೀಕ್ಷೆ ಬರೆದ ಮೂರು ಘಂಟೆಯಲ್ಲಿ ಫಲಿತಾಂಶ ಪ್ರಕಟ ; ವಿಟಿಯು ನ ವಿನೂತನ ದಾಖಲೆ

Spread the love

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು)ವು 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆಯನ್ನು ಮಾಡಿದ್ದು, ಅಂತಿಮ ವರ್ಷದ ಬಿ.ಇ./ಬಿ.ಟೆಕ್./ಬಿ.ಆರ್ಕ್/ಬಿ.ಪ್ಲಾನ್ ಸೆಮಿಸ್ಟರ್ ಪರೀಕ್ಷೆ ಮುಗಿದ ದಿನವೇ ಅಂತಿಮ ಸೆಮಿಸ್ಟರ್ ನ 42323 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಣೆ ಮಾಡಿ ದಾಖಲೆ ಮಾಡಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಪರೀಕ್ಷೆ ಬರೆದ ಮೂರು ಘಂಟೆಯಲ್ಲಿ ಫಲಿತಾಂಶ ಪ್ರಕಟ ; ವಿಟಿಯು ನ ವಿನೂತನ ದಾಖಲೆ

ಫಲಿತಾಂಶವನ್ನು ಬೇಗ ಪ್ರಕಟಣೆ ಮಾಡುವದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ವಿಭಾಗದಲ್ಲಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಭವಿಷ್ಯಕ್ಕೆ ತುಂಬಾ ಅನುಕೂಲವಾಗುತ್ತದೆ.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿಟಿಯುದಲ್ಲಿ ಆಡಳಿತ. ಶೈಕ್ಷಣಿಕ, ಪರೀಕ್ಷೆ, ಸಂಶೋಧಾನಾ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದು ಈ ಸಾಧನೆಯನ್ನು ಮಾಡಿದೆ ಎಂದು ಮಾನ್ಯ ಕುಲಪತಿಗಳು ತಿಳಿಸಿದರು


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ